ಉಡುಪಿ:ಡಿಸೆಂಬರ್ 09: ನೀರು ಸಾಗಾಟ ಟ್ಯಾಂಕರ್ ದಾರಿ ಯಲ್ಲಿ ಕೆಟ್ಟು ನಿಂತಿದ್ದು ಇದನ್ನ ಗಮನಿಸದೇ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಡಿ. 8ರಂದು ಪರ್ಕಳ ಎಸ್‌ಬಿಐ ಬ್ಯಾಂಕ್ ಮುಂಭಾಗ ಘಟನೆ ನಡೆದಿದೆ.
ಶೆಟ್ಟಿಬೆಟ್ಟು ನಿವಾಸಿ ಸೃಜನ್ ಸಾಗರ್ (22) ಮೃತ ಯುವಕ.ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ ಅವರು ಬೈಕಿಗೆ ಪೆಟ್ರೋಲ್ ತುಂಬಿಸಿ ಶೆಟ್ಟಿಬೆಟ್ಟು ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ
ನಿಯಂತ್ರಣ ತಪ್ಪಿ ಬೈಕ್ ಹಿಂದಿನಿಂದ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ಎಸೆಯಲ್ಪಟ್ಟು ಟ್ಯಾಂಕರ್‌ನ ಹಿಂಭಾಗಕ್ಕೆ ಸವಾರನ ತಲೆ ಬಡಿದಿದೆ.
ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ದುರದೃಷ್ಟವಶಾತ್ ಅವರು ಸಾವನ್ನಪ್ಪಿದ್ದಾರೆ .ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.