ಹೆಬ್ರಿ : ಡಿಸೆಂಬರ್ 07:ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ.) ಕರ್ನಾಟಕ -ಕೇರಳ ಇವರ ಸಂಯೋಜನೆಯಲ್ಲಿ “ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ” ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ ಕಾರ್ಯಕ್ರಮ,ಹಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಸಂಚಾರಿ ಗಿರಿಜನ ಆರೋಗ್ಯ ಪೆರ್ಡೂರು ಇವರ ಸಂಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ದಿನಾಂಕ 6/12/2024 ರಂದು ಹೆಬ್ರಿ ಬಡಗುಡ್ಡೆಯಲ್ಲಿ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಪುತ್ರನ್ ಹೆಬ್ರಿ ಇವರು ನಮ್ಮ ಸಮುದಾಯವು ಅಭಿವೃದ್ಧಿಯ ಹಂತಕ್ಕೆ ಸಾಗುವುದೇ ನಮ್ಮ ಉದ್ದೇಶ ಎಂದು ಪ್ರಾಸ್ತವಿಕವಾಗಿ ಮಾತನಾಡುತ್ತಾ ಇಂದು ಡಿಸೆಂಬರ್ 6 ಡಾ.ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನ ಇದರ ಅಂಗವಾಗಿ ಈ ದಿನ ಜಗತ್ತೆ ದುಃಖ ಪಡುವ ದಿನ. ಅಂದು ಭಾರತ ದೇಶದ ಪ್ರತಿಯೊಬ್ಬ ಬಾಂಧವರು ತಬ್ಬಲಿಯಾದ ದಿನ, ಭಾರತ ರತ್ನ ವಿಶ್ವಮಾನವ ಭಾರತದ ಜನರಿಗೆ ಕಾನೂನು ಸ್ವಾತಂತ್ರ್ಯ ಕೊಟ್ಟ ವಿಶ್ವವೇ ಮೆಚ್ಚುವಂತಹ, ಸಂವಿಧಾನ ಬರೆದಂತಹ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರು ನಮ್ಮನ್ನೆಲ್ಲ ಬಿಟ್ಟು ಪರಿನಿರ್ವಹಣಾ ದಿನವನ್ನು ನೆನಪಿಸಿಕೊಂಡು ಮಾತನಾಡಿದರು.
ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಡಾ. ವಿದ್ಯಾ ರವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ಸಮುದಾಯವು ಅಳಿವಿನಂಚಿಗೆ ಹೋಗದೆ ಇರುವ ಹಾಗೆ ಕಾಪಾಡುವುದು ಸಮುದಾಯದ ಜವಾಬ್ದಾರಿ ಇಂತಹ ತರಬೇತಿ, ಕ್ಯಾಂಪ್ ಗಳು ,ಬೀದಿ ನಾಟಕಗಳ ಮುಖಾಂತರ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವುದು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವುದು ಬಹಳ ಬಹಳ ಅಗತ್ಯ, ಅಲ್ಲದೆ ರಕ್ತಹೀನತೆ, ಹೃದಯಘಾತ, ಕ್ಯಾನ್ಸರ್ ಇಂತಹ ಕಾಯಿಲೆಗಳು ಹೇಗೆ ಬರುತ್ತದೆ, ಇದರಿಂದ ಮುಕ್ತರಾಗಲು ನಾವು ಆಹಾರ ಶೈಲಿ, ಜೀವನ ಕ್ರಮ ಬದಲಾಯಿಸಿಕೊಳ್ಳಬೇಕು ಮತ್ತು ದುಶ್ಚಟಗಳಿಂದ ಮುಕ್ತರಾಗಿರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ನಂತರ ಹೆಬ್ರಿ ಪೊಲೀಸ್ ಠಾಣೆಯ ASI ಆಗಿರುವ ದಯಾಕರ್ ಪ್ರಸಾದ್ ಇವರು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ದೌರ್ಜನ್ಯ ಹಿಂಸೆ ಅದಿನಿಯಮ 2013, ಸಂಖ್ಯೆ 14ರ ಕುರಿತು ವಿವರಿಸುತ್ತಾ 10 ಅಥವಾ 10 ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ ಆ ಸಂಸ್ಥೆಯ ಮಾಲೀಕರು ಮುಖ್ಯಸ್ಥರು ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳವಾದಾಗ ಅಪರಾಧಿಗಳಿಗೆ 5ರಿಂದ7 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುವುದೆಂದು ತಿಳಿಸಿದರು. ಹಾಗೆ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ, ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.ಅಲ್ಲದೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಸಂದರ್ಭದಲ್ಲಿ good touch ಮತ್ತು bad touch ಕಾನೂನು ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಹಾಗೆಯೇ ವಿವಿಧ ಕಾಯಿದೆಗಳ ಬಗ್ಗೆ ಹಾಗೂ ಘಟನೆಗಳ ಬಗ್ಗೆ ತಿಳಿಸಿದರು. ಹಾಗೆ ಹೆಬ್ರಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿರುವ ಸದಾಶಿವ ಸರ್ವೇಗಾರ್ ಇವರು ಕಾಲ ಕಾಲಕ್ಕೆ ಸರ್ಕಾರದಿಂದಾಗುವ ಕಾನೂನು ಬದಲಾವಣೆಗಳನ್ನು ಇಲಾಖೆಗಳ ಮುಖಾಂತರ ತಿಳಿದುಕೊಳ್ಳಬೇಕು, ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಇದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಣ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲಿಯೂ ಕೂಡ ಆರೋಗ್ಯದ ಬದಲಾವಣೆಗಳನ್ನು ಕಾಣಲು ಸಾಧ್ಯ. ಸಂಘಟನೆಯೊಂದಿಗೆ ಪೋಲಿಸ್ ,ಆಸ್ಪತ್ರೆ, ಪಂಚಾಯತ್ಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದರು. ನಂತರ ಹೆಬ್ರಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಸಂತೋಷ್ ಇವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಇರುವ ಉಚಿತ ವೈದ್ಯಕೀಯ ವ್ಯವಸ್ಥೆ ಮತ್ತು ಸೌಲಭ್ಯದ ಬಗ್ಗೆ ವಿವರಿಸಿದರು.
ಹಾಗೆ ಹೆಬ್ರಿ ಆಸ್ಪತ್ರೆಯ ಡಾ.ಚಿದಾನಂದ ಇವರು ಕೂಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ದಿವಾಕರ್ ರವರು ನಿರೂಪಿಸಿ ಸ್ವಾಗತಿಸಿದರು. ಪುತ್ರನ್ ಇವರು ಧನ್ಯವಾದ ಸಮರ್ಪಿಸಿದರು