ಮಣಿಪಾಲ:ಡಿಸೆಂಬರ್ 07: ಮಣಿಪಾಲದ ಅನಂತ ಕಲ್ಯಾಣ ನಗರ ಮುಖ್ಯರಸ್ತೆಯ ಬದಿಯಲ್ಲಿ ಶುಕ್ರವಾರ ಬೆಳಗ್ಗೆ ಕುತ್ತಿಗೆ ಸೀಳಿಕೊಂಡು ರಕ್ತಸಿಕ್ತವಾದ ಮೃತದೇಹ ಪತ್ತೆಯಾಗಿತ್ತು
ಹೊಟೇಲ್ ಕಾರ್ಮಿಕರಾಗಿದ್ದ ಶ್ರೀಧರ (38) ಮೃತರು. ಮೊದಲು ಬಿಯರ್ ಬಾಟಲಿಯಿಂದ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಶಂಕಿಸಲಾಗಿದ್ದು, ಅದರಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆತನೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅದರಂತೆ ಇದೀಗ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಡಾ| ಅರುಣ್ ಕೆ. ಅವರು ತಿಳಿಸಿದ್ದಾರೆ.