ಉಡುಪಿ:ಡಿಸೆಂಬರ್ 06: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಹಿರಿಯ ನಾಗರಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಡಿ. 5 ರಂದು ರಾತ್ರಿ ಉಡುಪಿಯ ಕಡಿಯಾಳಿಯಲ್ಲಿ ನಡೆದಿದೆ
ಮಂಗಳೂರು ನೋಂದಣಿ ಸ್ವಿಫ್ಟ್ ಕಾರು ಮಣಿಪಾಲದಿಂದ ಉಡುಪಿ ಕಡೆಗೆ ಮುಖ್ಯ ರಸ್ತೆಯಲ್ಲಿ ತೆರಳುತ್ತಿತ್ತು.ಅತೀ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ದಿಢೀರ್ ಬ್ರೇಕ್ ಹಾಕಿದ್ದರಿಂದ ರಸ್ತೆ ಬದಿಗೆ ಬಂದು ಪಲ್ಟಿಯಾಗಿದೆ
ಈ ವೇಳೆ ರಸ್ತೆ ಬದಿ ದ್ವಿಚಕ್ರ ವಾಹನದ ಬಳಿಯಲ್ಲಿ ನಿಂತಿದ್ದ ಹಿರಿಯ ನಾಗರಿಕರಿಗೆ ಮತ್ತು ಮತ್ತೂಂದು ಕಾರಿಗೆ ಢಿಕ್ಕಿ ಹೊಡೆದಿದ್ದು ಅಪಘಾತ ದ ವಿಡಿಯೋ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ