ಬೆಳ್ತಂಗಡಿ : ಡಿಸೆಂಬರ್ 05: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ನೌಷದ್ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐವರು ಅಧಿಕಾರಿಗಳಿಂದ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದಾಳಿ ವಿಚಾರ ತಿಳಿದು ಮನೆಯನ್ನು ಲಾಕ್ ಮಾಡಿಕೊಂಡು ಕುಟುಂಬ ಪರಾರಿಯಾಗಿದ್ದಾರೆ ಎನ್ನಲಾಗಿದ್ದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯಾಗಿರುವ ನೌಷದ, ಬೆಳ್ತಂಗಡಿ ಠಾಣೆಯ ಇಬ್ಬರು ಪೊಲೀಸರ ಜೊತೆಗೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ ಆರೋಪಿ ನೌಷದ್ ಪತ್ತೆಗಾಗಿ 2 ಲಕ್ಷ ರಿವಾರ್ಡ್ ಘೋಷಿಸಿದ್ದಾರೆ.