ಕಳ್ತೂರು:ಡಿಸೆಂಬರ್ 04:ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ.) ಕರ್ನಾಟಕ -ಕೇರಳ ಮತ್ತು ಗೆಳೆಯರ ಬಳಗ ಕ್ರೀಡಾ ಸಂಘ(ರಿ.)ಕಳ್ತೂರು ಸಂತೆಕಟ್ಟೆ ಇವರ ಸಯುಕ್ತ ಆಶ್ರಯದಲ್ಲಿ “ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ” ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ ಅಂಗವಾಗಿ “ಪಂಜಿನ ಮೆರವಣಿಗೆ”ಯನ್ನು ದಿನಾಂಕ 3/12/2024 ನೇ ಮಂಗಳವಾರ ಸಂಜೆ 6.30 ರಿಂದ ಸಂತೆಕಟ್ಟೆ ಸರ್ಕಲ್ ನಿಂದ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದ ಉದ್ದೇಶವನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಇವರು ಸಾರ್ವಜನಿಕರ ಎದುರು ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ 38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನವೀನ್ ಪೂಜಾರಿ ಇವರು ಡೋಲು ಬಾರಿಸಿ ಪಂಜನ್ನು ಹೊತ್ತಿಸುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಸಂತೆಕಟ್ಟೆ ಸರ್ಕಲ್ ನಿಂದ ಕಳ್ತೂರು ಕೊರಗ ಗುಂಪಿನವರೆಗೆ 38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನವೀನ್ ಪೂಜಾರಿ, ಪಂಚಾಯತ್ ಸದಸ್ಯರಾದ ಉಷಾ ಪೂಜಾರಿ, ನಾಗೇಶ್ ನಾಯ್ಕ, ಜೊತೆಗೆ ರವಿ ಪೂಜಾರಿ, ಗಿರೀಶ್ ಕಾಮತ್ ಹಾಗೂ ಸಮುದಾಯ ಬಾಂಧವರು ಸೇರಿ ಪಂಜಿನ ಮೆರವಣಿಗೆಯ ಮೂಲಕ ಕಳ್ತೂರಿಗೆ ಆಗಮಿಸಲಾಯಿತು
ತದನಂತರ ಸಭಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಭಾ ಕಾರ್ಯಕ್ರಮದ ವೇದಿಕೆಗೆ ಕಾರ್ಯಕ್ರಮದ ಉದ್ಘಾಟಕರಾಗಿ ಪಂಚಾಯತ್ ಅಧ್ಯಕ್ಷರು ನವೀನ್ ಪೂಜಾರಿ, ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರು ನಾಗೇಶ್ ನಾಯ್ಕ, ಉಷಾ ಪೂಜಾರಿ ಹಾಗೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷರು ಅಮ್ಮಣ್ಣಿ ಅಬ್ಲಿಕಟ್ಟೆ ಹಾಗೆ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಸುಶೀಲಾ ನಾಡ ಮತ್ತು ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಗೆಳೆಯರ ಬಳಗ ಕ್ರೀಡಾ ಸಂಘ ಕಳ್ತೂರು ಸಂತೆಕಟ್ಟೆ ಇದರ ಅಧ್ಯಕ್ಷರಾದ ಚಂದ್ರ ಕಳ್ತೂರು ಇವರು ವೇದಿಕೆಯನ್ನು ಅಲಂಕರಿಸಿದರು.
ಕಾರ್ಯಕ್ರಮವನ್ನು ಗೆಳೆಯರ ಬಳಗ ತಂಡವು ಧ್ಯೇಯ ಗೀತೆಯನ್ನು ಹಾಡುವ ಮೂಲಕ ಪ್ರಾರಂಭಿಸಲಾಯಿತು. ವೇದಿಕೆಯಲ್ಲಿರುವ ಗಣ್ಯರನ್ನು ಸುಶ್ಮಿತಾ ಕಳ್ತೂರು ಇವರು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ನವೀನ್ ಪೂಜಾರಿ ಇವರು ಡೋಲು ಬಾರಿಸುವುದರ ಮೂಲಕ ಚಂದಗಾಣಿಸಿ, ನಮ್ಮ ಇಂತಹ ಕಾರ್ಯಕ್ರಮಗಳಿಗೆ ಯಾವಾಗಲೂ ನನ್ನ ಪ್ರೋತ್ಸಾಹ, ಬೆಂಬಲ ನಿಮಗೆ ಇದೆ ಎಂದು ತಮ್ಮ ಉದ್ಘಾಟನಾ ಮಾತುಗಳನ್ನಾಡಿದರು.
ನಂತರ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಅಮ್ಮಣ್ಣಿ ಅಬ್ಲಿಕಟ್ಟೆ ಇವರು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ಕುರಿತು ಚುಟುಕಾಗಿ ಮಾತನಾಡಿದರು, ಪಂಚಾಯತ್ ಸದಸ್ಯರಾಗಿರುವ ಉಷ ಪೂಜಾರಿ ಹಾಗೂ ನಾಗೇಶ್ ನಾಯ್ಕ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಇದರ ಅಧ್ಯಕ್ಷರಾಗಿರುವ ಸುಶೀಲಾ ನಾಡ ಇವರು ವಿಶ್ವ ಮಾನವ ಹಕ್ಕುಗಳ ಕುರಿತು ಮತ್ತು ಸಂಘಟನೆಯ ಬಲವರ್ಧನೆಯ ಕುರಿತು ಹಾಗೆ ಒಕ್ಕೂಟದಿಂದ ನಡೆಯುತ್ತಿರುವ ಕಾರ್ಯಕ್ರಮಗಳು ತರಬೇತಿಗಳ ಕುರಿತು ವಿವರಿಸಿ ಭಾಗವಹಿಸುವ ಕುರಿತು ಮಾಹಿತಿ ನೀಡಿದರು.
ನಂತರ ಗೆಳೆಯರ ಬಳಗ ಕ್ರೀಡಾ ಸಂಘ ಕಳ್ತೂರು ಸಂತೆಕಟ್ಟೆ ಇದರ ಅಧ್ಯಕ್ಷರಾಗಿರುವ ಚಂದ್ರ ಕಳ್ತೂರು ಇವರು ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಹಿಂಸೆ ದೌರ್ಜನ್ಯಗಳು ಮಹಿಳೆಯರಿಗೆ ಅರಿವಿಲ್ಲದೆ ದೌರ್ಜನ್ಯಗಳು ನಡೆಯುತ್ತದೆ. ಈ ತರಹದ ಹಿಂಸೆ ದೌರ್ಜನ್ಯಗಳ ಕುರಿತು ನಮ್ಮ ಒಕ್ಕೂಟವು ಹಲವಾರು ತರಬೇತಿ ಕಾರ್ಯಗಾರ ವನ್ನು ಹಮ್ಮಿಕೊಂಡಿದ್ದು, ಹಲವಾರು ಹೆಣ್ಣು ಮಕ್ಕಳು ಮಹಿಳೆಯರು ಭಾಗವಹಿಸಿ ತಮಗಾಗುವ ದೌರ್ಜನ್ಯಗಳ ಕುರಿತು ಅರಿತುಕೊಂಡಿದ್ದಾರೆ. ಇನ್ನೂ ಕೂಡ ಹಲವಾರು ಹೆಣ್ಣು ಮಕ್ಕಳಿಗೆ ಈ ಹಿಂಸೆ ದೌರ್ಜನ್ಯಗಳ ಕುರಿತು ಅರಿವಿಲ್ಲ , ಎಲ್ಲಾ ಮಕ್ಕಳು ಒಕ್ಕೂಟದಲ್ಲಿ ನಡೆಯುವ ತರಬೇತಿಗಳಲ್ಲಿ ಭಾಗವಹಿಸಿ ಎಂದು ಅಧ್ಯಕ್ಷೀಯ ಮಾತುಗಳನ್ನಾಡಿದರು. ನಂತರ ವೇದಿಕೆಯಲ್ಲಿರುವ ಗಣ್ಯರಿಗೆ ಅಭಿಜಿತ್ ಕಳ್ತೂರು ಇವರು ಧನ್ಯವಾದಗಳನ್ನು ಸಮರ್ಪಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿಮಲಾ ಕಳ್ತೂರು ಇವರು ನೆರವೇರಿಸಿದರು. ನಂತರ ಸಹಭೋಜನವನ್ನು ಏರ್ಪಡಿಸಿದ್ದು 38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ನವೀನ್ ಪೂಜಾರಿ, ಸದಸ್ಯರಾಗಿರುವ ಉಷಾ ಪೂಜಾರಿ, ನಾಗೇಶ್ ನಾಯ್ಕ ಇವರು ನಾವೇ ತಯಾರಿಸಿರುವ ಪಾಯಸವನ್ನು ಸ್ವೀಕರಿಸಿದರು. ನಂತರ ಸಮುದಾಯ ಬಾಂಧವರು ಕೂಡ ಸಹಭೋಜನವನ್ನು ಮಾಡಿದರು.
ಊಟದ ನಂತರ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಇವರೊಂದಿಗೆ ಸಮುದಾಯ ಬಾಂಧವರು ಸೇರಿ ಡೋಲು ವಾದನದೊಂದಿಗೆ ಕುಡಿದು ಸಂಭ್ರಮಿಸಿದರು.