ಉಡುಪಿ :ಡಿಸೆಂಬರ್ 04: ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಡಿ.2ರಂದು ಮಧ್ಯಾಹ್ನ ವೇಳೆ ನಡೆದಿದೆ.
ಉಡುಪಿಯ ಅಜ್ಜರಕಾಡುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಆಸ್ಪತ್ರೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು ಕಟ್ಟಡದಿಂದ ಬಿದ್ದು ಕಾರ್ಮಿಕರು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ
ಮೃತರನ್ನು ಮೂಡುಬೆಳ್ಳೆ ಗ್ರಾಮದ ಸಂತೋಷ್(46) ಎಂದು ಗುರುತಿಸ ಲಾಗಿದೆ. ಇವರು ನಿರ್ಮಾಣ ಹಂತದಲ್ಲಿರುವ ಸರಕಾರಿ ಆಸ್ಪತ್ರೆಗೆ ವಾಟರ್ ಪ್ರೂಫಿಂಗ್ ಕೆಲಸಕ್ಕೆ ಹೋಗಿದ್ದು, ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೂಫಿಂಗ್ ಮಾಡಲು ತೆರಳಿದ್ದರು ಎನ್ನಲಾಗಿದ್ದು ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿ ಸಿದ ಪಾಲಿ ಕಾರ್ಮರ್ ಶೀಟ್ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯ ಅಳವಡಿಸಿದ ಶೀಟ್ ಒಂದರ ಮೇಲೆ ಕಾಲು ಇಟ್ಟದರಿಂದ ಸಂತೋಷ್ ಆಯತಪ್ಪಿ6ನೇ ಅಂತಸ್ಥಿನ ಮೇಲ್ಚಾವಣಿನಿಂದ ನೇರ ನೇಲಕ್ಕೆ ಅಂಗಾತ ಬಿದ್ದು ಈ ದುರ್ಗಟನೆ ಸಂಭವಿಸಿದೆ ಎನ್ನಲಾಗಿದೆ
ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ಮಾಹಿತಿ ಲಭ್ಯವಾಗಿದ್ದು . ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.