ಬೆಳ್ತಂಗಡಿ: ಡಿಸೆಂಬರ್ 03:ನದಿಯಲ್ಲಿ ಮುಳುಗಿ ಬೆಳಾಲು ನಿವಾಸಿ ಪ್ರಸಾದ್(೩೮) ನೀರುಪಾಲದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲುನ ಕೂಡಿಗೆಯಲ್ಲಿ ನಡೆದಿತ್ತು
ಕಾಲು ಜಾರಿ ಪ್ರಸಾದ್ ನೇತ್ರಾವತಿ ನದಿಗೆ ಬಿದ್ದಿದ್ದರು. ಅಗ್ನಿಶಾಮಕ, ಮುಳುಗುತಜ್ಞ ಈಶ್ವರ್ ಮಲ್ಪೆ ತಂಡದಿಂದ ಪ್ರಸಾದ್ ಮೃತದೇಹ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸ್ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.
ಏಳು ವರ್ಷಗಳ ಕಾಲ ಆರ್ ಎಸ್ ಎಸ್ ಪ್ರಚಾರಕ್ ಆಗಿ ಸೇವೆ ಪ್ರಸಾದ್ ಸಲ್ಲಿಸಿದ್ದರು.,
ಮೂವರು ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ, ಪ್ರಸಾದ್ ರನ್ನು ಜತೆಗಿದ್ದವರು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ನಾಪತ್ತೆಯಾಗಿದ್ದರು
ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ