ಹೆಬ್ರಿ, ಡಿಸೆಂಬರ್ 02:ಕಸದ ರಾಶಿಯಲ್ಲಿ ನ. 30ರಂದು ಕೊಳೆತ ಸ್ಥಿತಿಯಲ್ಲಿ ದೊರೆತ ಅಪರಿಚಿತ ಶವದ ಗುರುತು ಪತ್ತೆಯಾಗಿದೆ.
ಹೆಬ್ರಿ ಕೆಳಪೇಟೆ ಮೂರು ರಸ್ತೆ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ಕೊಳೆತ ಸ್ಥಿತಿಯಲ್ಲಿ ದೊರೆತ ಅಪರಿಚಿತ ಶವ ಸಿಕ್ಕಿತ್ತು
ಇದೀಗ ಕೊಳೆತ ಸ್ಥಿತಿಯಲ್ಲಿ ದೊರೆತ ಶವವನ್ನು ಮೂಲತಃ ಹೆಬ್ರಿ ಸಂತೆಕಟ್ಟೆ ನಿವಾಸಿ ರಾಜೀವ ಪಾಣರ (54) ಅವರದ್ದು ಎಂದು ಗುರುತಿಸಲಾಗಿದೆ.
ಮೃತ ರಾಜೀವ ಅವರು ಬೆಳಂಜೆಯ ಬಾಡಿಗೆ ಮನೆ ಒಂದರಲ್ಲಿ ವಾಸವಿದ್ದರು. ವಿಪರೀತ ಮದ್ಯಪಾನ ಚಟ ಹೊಂದಿದ್ದ ಇವರು ದಿನ ಮನೆಗೆ ಹೋಗದೆ ಬಸ್ ತಂಗುದಾಣ ಬಳಿ ಇರುತ್ತಿದ್ದರು ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಭೋಗಿ ಹಾಡಿಯ ಮರದ ಬಳಿ ಕೂತಿದ್ದ ವ್ಯಕ್ತಿಯನ್ನು ಈ ಭಾಗದಲ್ಲಿ ತಿರುಗುತ್ತಿದ್ದ ವಿದ್ಯಾರ್ಥಿಗಳು ನೋಡಿದ್ದಾರೆ ಎಂದು ಹೇಳಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿದ್ದಾರೋ ಎಂಬುದು ತನಿಖೆಯ ಬಳಿಕ ತಿಳಿದು ಬರಬೇಕಿದೆ.