ಕಾರ್ಕಳ :ಡಿಸೆಂಬರ್ 02:ಮಾರಾಟಕ್ಕೆಂದು ಇರಿಸಿದ್ದ 10 ಕೋಳಿಗಳನ್ನು ಕಳವುಗೈಯಲಾಗಿದೆ ಎಂದು ಸ್ಥಳೀಯ ನಿವಾಸಿ ಉದಯ ಅವರು ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಮಣ್ ಗ್ರಾಮದ ಚರ್ಚ್ ಸಮೀಪದ ತಮ್ಮ ಶೆಡ್‌ನಲ್ಲಿ ನ. 26ರಂದು ಸಂಜೆ 21 ಕೋಳಿಗಳನ್ನು ಕಬ್ಬಿಣದ ಗೂಡಿನಲ್ಲಿ ಹಾಕಿ ಉದಯ ಅವರು ಮನೆಗೆ ಹೋಗಿದ್ದು, ಮರುದಿನ ಮುಂಜಾನೆ ಬಂದು ನೋಡಿದಾಗ ಪೈಕಿ ಸುಮಾರು 30,000 ರೂ.ಮೌಲ್ಯದ 10 ಹುಂಜಗಳು ಕಳವಾಗಿದ್ದವು. ಎಂದು ದೂರಿನಲ್ಲಿ ತಿಳಿಸಲಾಗಿದೆ.