ಸಿದ್ದಾಪುರ,: ಡಿಸೆಂಬರ್ 01: ಡ್ಯಾಂ ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ವೆ ಸಮೀಪದ ಗುಮ್ಮಲ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಗೋಳಿಯಂಗಡಿ ಜ್ಯುವೆಲ್ಲರ್ಸ್ ವೊಂದರ ಮಾಲಕ ಶ್ರೀಧರ ಆಚಾರ್ಯ ಅವರ ಪುತ್ರ 13 ವರ್ಷದ ಶ್ರೀಶ (8ನೇ ತರಗತಿ) ಹಾಗೂ ಗುಮ್ಮಹಲ ಎಂಬಲ್ಲಿನ ರಾಮ ನಾಯ್ಕ ಅವರ ಪುತ್ರ 19 ವರ್ಷದ ಜಯಂತ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಒಟ್ಟು ನಾಲ್ಕು ಮಂದಿ ಬಾಲಕರು ರಜೆಯ ಹಿನ್ನೆಲೆಯಲ್ಲಿ ಮನೆ ಸಮೀಪದ ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಹಾಗೂ ಪ್ರಜ್ವಲ್ ಅಕಸ್ಮಿಕ ವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಶಂಕರ ನಾರಾಯಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿ ಇನಷ್ಟೇ ಲಭ್ಯ ವಾಗಬೇಕಿದೆ