ಕಾರ್ಕಳ:ನವೆಂಬರ್ 30: ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಲಾರೆನ್ಸ್ ಡೆಸಾ ಪತ್ನಿ ಮೃತಪಟ್ಟ ಮರುದಿನವೇ ಮೃತಪಟ್ಟಿರುವ ಘಟನೆ ನಡೆದಿದೆ
ಲಾರೆನ್ಸ್ ಡೆಸಾ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಅನಾರೋಗ್ಯದಿಂದ ಮನೆಯಲ್ಲೇ ಮೃತಪಟ್ಟಿದ್ದರು. ಅದರ ಬೆನ್ನಲ್ಲೆ ಪತಿ ಲಾರೆನ್ಸ್ ಡೆಸಾ ಕೂಡ ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಲಾರೆನ್ಸ್ ಡೆಸಾ ಅವರು ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯರಾಗಿದ್ದು ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಲಾರೆನ್ಸ್ ಡೆಸಾ ಅವರು ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯ, 2-3 ಬಾರಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ, ಇಂಗ್ಲಿಷ್ ಮಾಧ್ಯಮ ಶಾಲೆ, ಧರ್ಮಗುರುಗಳ ಮನೆ, ಚರ್ಚ್, ಸಭಾಭವನ ಎಲ್ಲವೂ ಇವರದೇ ಆಳ್ವಿಕೆಯಲ್ಲಿರುವಾಗಲೇ ಆಗಿವೆ. ಯಾವುದೇ ಜವಾಬ್ದಾರಿಯನ್ನು ಕೊಟ್ಟರು ಅತ್ಯಂತ ಯಶಸ್ವಿ ಮಟ್ಟದಲ್ಲಿ ನಿಭಾಯಿಸಬಲ್ಲ ಸಾರಥಿಯಾಗಿದ್ದರು. ಫ್ರೆಂಡ್ಸ್ ಸರ್ಕಲ್, ಲಯನ್ಸ್ ಕ್ಲಬ್, ಕಥೊಲಿಕ್ ಸಭಾ ಜೊತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಇತರ ಬೇರೆ ಬೇರೆ ಹುದ್ದೆಗಳನ್ನು ಸ್ವೀಕರಿಸಿ ಸಂಘಟನೆಯನ್ನು ಬಲಿಷ್ಠ ಮಾಡಿದ್ದರು.ಇವರು ಮಾಡುವ ಕೃಷಿ ಎಲ್ಲರಿಗೂ ಪ್ರೇರಣೆಯಾಗಿತ್ತು.
ಮೃತರು ಪುತ್ರ, ಹಾಗೂ ಪುತ್ರಿಯನ್ನು ಹಾಗೂ ಅಪಾರು ಬಂಧು ವರ್ಗವನ್ನು ಅಗಲಿದ್ದಾರೆ.