ಉಡುಪಿ:ನವೆಂಬರ್ 30: ರಾಜ್ಯದ ಪದವಿ ಮತ್ತು ಸ್ನಾತಕೋತ್ತರದ ಸುಮಾರು 51 ಲಕ್ಷ ವಿದ್ಯಾರ್ಥಿಗಳಿಗೆ 22 ಕ್ಕೂ ಹೆಚ್ಚು ವಿಶ್ವ ವಿದ್ಯಾನಿಲಯಗಳು ಅಂಕ ಪಟ್ಟಿ ನೀಡಿರುವುದನ್ನು ಖಂಡಿಸಿ ರಾಜ್ಯದಾದ್ಯಂತ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರೆ ನೀಡದೇ ಇರುವುದಕ್ಕೆ ಪ್ರತಿಭಟನೆ ಅಂಗವಾಗಿ ನವೆಂಬರ್ 29 ರಂದು ಉಡುಪಿಯಲ್ಲಿ ಎಸ್ ಎಫ್ ಐ ನಿಯೋಗ ಉಡುಪಿ ಜಿಲ್ಲಾಧಿಕಾರಿಗೆ ಮನವಿ ನೀಡಿತು.
ರಾಜ್ಯ ಸರ್ಕಾರ ರಾಜ್ಯದಲ್ಲಿ NEP ರದ್ದುಗೊಳಿಸಿ SEP ಜಾರಿಗೊಳಿಸಿದೆ. ಆದರೆ SEP ವಿದ್ಯಾರ್ಥಿಗಳಿಗೂ ಸಹ ಅಂಕ ಪಟ್ಟಿ ಸಿಗುತ್ತಿಲ್ಲ.ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಳಿ ನೇರ ಹೋಗಿ ಕೇಳಿದರೆ ಡಿಜಿ ಲಾಕರ್ ನಲ್ಲಿ ಸ್ವೀಕರಿಸಲು ಹೇಳುತ್ತಿದೆ ಡಿಜಿ ಲಾಕರ್ ನಲ್ಲಿ ತಾಂತ್ರಿಕ ಸಮಸ್ಯೆಗಳು UCCMS ಜಾರಿಗೆ ಬಂದ ದಿನದಿಂದ ಸಮಸ್ಯೆ ತೀವ್ರವಾಗಿದೆ ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ ಎಂದು ಎಸ್ಎಫ್ಐ ಆರೋಪಿಸಿದೆ.
ರಾಜ್ಯಪಾಲರು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮುದ್ರಿತ ಅಂಕಪಟ್ಟಿ ಗಳನ್ನು ವಿತರಿಸಬೇಕು ಎಂದು ಆದೇಶ ನೀಡಿದರೂ ವಿಶ್ವವಿದ್ಯಾನಿಲಯಗಳು ಕಡೆಗಣಿಸಿವೆ ಅಂಕ ಪಟ್ಟಿ ವಿತರಣೆಯಲ್ಲಿ ಸುಮಾರು 200 ಕೋಟಿ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಎಸ್ಎಫ್ಐ ಆಪಾಧಿಸಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಬೇಕು ರಾಜ್ಯ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇಲ್ಲವಾದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದೆ.
ನಿಯೋಗದಲ್ಲಿ ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ರಿತಿಕಾ, ಜಿಲ್ಲಾ ಸಂಚಾಲಕ ಧ್ರುವ,ಸಿಂಚನ, ನಿಖಿತಾ,ಸಮೀಪ್ ಇದ್ದರು