ಮಂಗಳೂರು : ನವೆಂಬರ್ 27: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಕ್ಷೇತ್ರದ ಆರೂ ಮೇಳಗಳ ತಿರುಗಾಟ ಸೋಮವಾರ ಸೇವೆಯಾಟದೊಂದಿಗೆ ಆರಂಭವಾಯಿತು. ದೇಗುಲದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಕಲಾವಿದರಿಗೆ ಅವರು ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ ನೀಡಿದರು.
ಗೆಜ್ಜೆ ಮುಹೂರ್ತದ ಪೂರ್ವಭಾವಿಯಾಗಿ ದೇವಾಲಯದ ಒಳಗೋಪುರದಲ್ಲಿ ಆರು ಮೇಳಗಳ ಪ್ರಮುಖ ಭಾಗವತರ ಹಿನ್ನಲೆಯಲ್ಲಿ ತಾಳಮದ್ದಳೆ ನಡೆಯಿತು. ರಥಬೀದಿಯಲ್ಲಿ ಆರು ಮೇಳಗಳ ದೇವರುಗಳ ಚೌಕಿ ಪೂಜೆಯ ನಂತರ ಬಯಲಾಟ ನಡೆಯಿತು.