ಉಡುಪಿ : ನವೆಂಬರ್ 26:ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೋಟಿನ ಮೀನು ಖಾಲಿ ಮಾಡುವ ಕೆಲಸವನ್ನು ಮಾಡುತ್ತಿದ್ದ ಕೊಪ್ಪಳಜಿಲ್ಲೆಯ ವನಬಳ್ಳಾರಿಯ ದ್ಯಾಮಮ್ಮ ದೇವಸ್ಥಾನ ಸಮೀಪದ ದುರುಗಪ್ಪ ಕುರಿ ಎಂಬವರ ಮಗನಾದ ಕನಕಪ್ಪ (21) ಎಂಬ ಯುವಕ ತನ್ನ ಊರಿಗೆ ತೆರಳುವುದಾಗಿ ತಿಳಿಸಿ ಮಲ್ಪೆಯಿಂದ ಹೊರಟಿದ್ದು ನಾಪತ್ತೆಯಾಗಿದ್ದಾನೆ
ಕಳೆದ ನಾಲ್ಕು ದಿನದ ಹಿಂದೆ ಕೊಪ್ಪಳಕ್ಕೆ ಹೋಗುವುದಾಗಿ ತಿಳಿಸಿ ಮಲ್ಪೆಯಿಂದ ಹೊರಟು ಹೋಗಿದ್ದು , ಅತ್ತ ಕೊಪ್ಪಳದಲ್ಲಿರುವ ಮನೆಗೂ ಹೋಗದೆ , ಇತ್ತ ವಾಪಾಸು ಮಲ್ಪೆಗೂ ಬಾರದೆ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ. ಈ ನಡುವೆ ಈತನ ಮೊಬೈಲ್ ಕೂಡ ರಿಂಗಣಿಸದೆ ಇರುವುದು ಗೆಳೆಯರು ಮತ್ತು ಮನೆಯವರನ್ನು ಗಾಬರಿಗೊಳಿಸಿದೆ
ಈ ಯುವಕನನ್ನು ಯಾರಾದರೂ ಕಂಡಲ್ಲಿ ಅಥವಾ ಈತನ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಈಶ್ವರ್ ಮಲ್ಪೆ 9663434415 ಅಥವಾ 9947733787 ಅಥವಾ ಸ್ಥಳೀಯ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡದವರು ವಿನಂತಿಸಿದ್ದಾರೆ