ಮಣಿಪಾಲ, ನವೆಂಬರ್ 25: ಐಎಂಎ ಡಾಕ್ಟರ್ಸ್ ಲೀಗ್ (ಐಡಿಎಲ್) ಲೆಜೆಂಡ್ಸ್ ಟ್ರೋಫಿ 2024, ಪ್ರತಿಷ್ಠಿತ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಮಂಗಳೂರು ಲೆಜೆಂಡ್ಸ್ ತಂಡದ ವಿರುದ್ಧದ ಫೈನಲ್‌ನಲ್ಲಿ ಪ್ರಬಲ ಪ್ರದರ್ಶನ ನೀಡಿದ ಹಾಸನ ಲೆಜೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ನವೆಂಬರ್ 22 ರಿಂದ 24 ರವರೆಗೆ ಮಣಿಪಾಲ್ ಎಂಡ್ ಪಾಯಿಂಟ್ ಮತ್ತು ಎಂಐಟಿ ಮೈದಾನದಲ್ಲಿ ನಡೆದ ಈ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನವೆಂಬರ್ 21 ರಂದು ಜೆರ್ಸಿ ಬಿಡುಗಡೆ ಕಾರ್ಯಕ್ರಮ ಭವ್ಯವಾಗಿ ನಡೆದಿತ್ತು.
ಐಎಂಎ ಉಡುಪಿ ಕರಾವಳಿ ಶಾಖೆ, ಐಎಂಎ ಮಂಗಳೂರು, ಮತ್ತು ಮಾಹೆ ಜಂಟಿಯಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯ ವೈದ್ಯರು ತಮ್ಮ ಅಸಾಧಾರಣ ಕ್ರಿಕೆಟ್ ಪ್ರತಿಭೆ ತೋರ್ಪಡಿಸುವ ಜೊತೆಗೆ ಸೌಹಾರ್ದತೆ, ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ಕ್ರೀಡೆ ಮತ್ತು ಫ್ಯಾಶನ್‌ಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಪ್ರಸ್ತುತಪಡಿಸಿದರು.
ಸೆಮಿಫೈನಲ್‌ನಲ್ಲಿ ಉಡುಪಿ ಮತ್ತು ದಾವಣಗೆರೆ ತಂಡವು ಹಾಸನ ಮತ್ತು ಮಂಗಳೂರು ತಂಡಗಳ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದವು. ಫೈನಲ್‌ನಲ್ಲಿ ಹಾಸನ ಲೆಜೆಂಡ್ಸ್ ತಂಡದ ಬೌಲರ್‌ಗಳು ಮಂಗಳೂರು ತಂಡಕ್ಕೆ 10 ಓವರ್‌ಗಳಲ್ಲಿ ಕೇವಲ 51 ರನ್‌ಗಳನ್ನು ಮಾತ್ರ ನೀಡಿದರು. ಹಾಸನದ ಬ್ಯಾಟ್ಸ್‌ಮನ್‌ಗಳು ಕೇವಲ 7.5 ಓವರ್‌ಗಳಲ್ಲಿ ಸುಲಭವಾಗಿ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿ. ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪಂದ್ಯಾವಳಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಹಾಸನ ಲೆಜೆಂಡ್ಸ್ ನ ಡಾ. ರಮೇಶ್ ಅವರು 129 ರನ್‌ಗಳನ್ನು ಗಳಿಸಿದ ಪಂದ್ಯಶ್ರೇಷ್ಠ ಮತ್ತು ಶರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿ ಸ್ಟಾರ್ ಬ್ಯಾಟ್ಸ್‌ಮ್ಯಾನ್ ಆಗಿ ಹೊರ ಹೊಮ್ಮಿದರು. 9 ವಿಕೆಟ್ ಪಡೆದ ದಾವಣಗೆರೆ ಲೆಜೆಂಟ್ಸ್ ತಂಡದ ಡಾ. ಬಿನಯ್ ಸಿಂಗ್ ಉತ್ತಮ ಬೌಲರ್ ಆಗಿ ಮಿಂಚಿದರು.
ಐಎಂಎ ಚಾಪ್ಟರ್ ಹಾಗೂ ಮಾಹೆ ಸಹಭಾಗಿತ್ವದಲ್ಲಿ ಪಂದ್ಯಾಟವು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದೆ. ವೈದ್ಯಕೀಯ ಭ್ರಾತೃತ್ವದಲ್ಲಿ ಏಕತೆ, ಸೌಹಾರ್ದತೆ ಮತ್ತು ಸ್ಪರ್ಧಾತ್ಮಕ ಮನೋಭಾವದ ದಾರಿದೀಪವಾಗಿ ಉಳಿಯುವಂತೆ ಮಾಡಿದೆ. ಸಮಾರೋಪ ಸಮಾರಂಭದಲ್ಲಿ ಮಾಹೆ ಮಣಿಪಾಲದ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಐಎಂಎ ಉಡುಪಿ ಅಧ್ಯಕ್ಷ ಡಾ.ಸುರೇಶ್ ಶೆಣೈ ಹಾಗೂ ಡಾ. ಕರಾವಳಿ, ಆಟಗಾರರು ಮತ್ತು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ (ಫೈನಲ್) ಹಾಸನದ ಡಾ.ರಮೇಶ್‌ಗೆ, ಪಂದ್ಯದ ಕ್ಷಣಕ್ಕಾಗಿ ಹಾಸನದ ಡಾ.ರಘುಪತಿ ಮತ್ತು ಫೈಟರ್ ಆಫ್ ದಿ ಮ್ಯಾಚ್‌ಗಾಗಿ ಕುಡ್ಲದ ಡಾ.ಮುರಳಿಕೃಷ್ಣ ಅವರಿಗೆ ಅಂತಿಮ ಪಂದ್ಯದ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಪಂದ್ಯಾವಳಿಯ ಪ್ರಶಸ್ತಿಗಳಲ್ಲಿ 129 ರನ್‌ಗಾಗಿ ಹಾಸನ ಲೆಜೆಂಡ್ಸ್‌ನ ಡಾ. ರಮೇಶ್‌ಗೆ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ, 9 ವಿಕೆಟ್‌ಗಾಗಿ ದಾವಣಗೆರೆಯ ಡಾ. ಬಿನಯ್ ಸಿಂಗ್‌ಗೆ ಉತ್ತಮ ಬೌಲರ್ ಪ್ರಶಸ್ತಿ, ದಾವಣಗೆರೆ ಸ್ಟಾರ್ಸ್‌ನ ಡಾ. ಬಿನಯ್ ಸಿಂಗ್ 6 ಸಿಕ್ಸರ್‌ಗಳೊಂದಿಗೆ ಹೆಚ್ಚು ಸಿಕ್ಸರ್‌ಗಳು, ಹಾಸನ ಲೆಜೆಂಡ್ಸ್‌ನ ಡಾ. ಮಧುಸೂದನ್‌ಗೆ ಟೂರ್ನಮೆಂಟ್‌ನ ಬೌಲರ್ ಪ್ರಶಸ್ತಿ ನೀಡಲಾಯಿತು. ದಾವಣಗೆರೆ ಸ್ಟಾರ್ಸ್‌ನ ವಿಜಯ್ ಶಂಕರ್‌ಗೆ ಉತ್ತಮ ಫೀಲ್ಡರ್ ಮತ್ತು 6 ಸ್ಟಂಪ್ ಮಾಡುವ ಮೂಲಕ ಗಮನ ಸೆಳೆದ ಉಡುಪಿ ಲೆಜೆಂಡ್ಸ್‌ನ ಡಾ. ರಾಜೇಶ್ ಭಕ್ತ ಅವರಿಗೆ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ನೀಡಲಾಯಿತು. ಹಾಸನದ ಡಾ.ರಮೇಶ್ ಅವರ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಪ್ಲೇಯರ್ ಕಿರೀಟವನ್ನು ಪಡೆದರು.
ಪಂದ್ಯಾವಳಿಯಲ್ಲಿ ಒಟ್ಟು 1,849 ರನ್‌ಗಳು, 137 ವಿಕೆಟ್‌ಗಳು, 42 ಸಿಕ್ಸರ್‌ಗಳು ಮತ್ತು 129 ಬೌಂಡರಿಗಳೊಂದಿಗೆ ಪ್ರಭಾವಶಾಲಿ ಅಂಕಿಅಂಶಗಳನ್ನು ಪ್ರದರ್ಶಿಸಲಾಯಿತು. MAHE IDL ಲೆಜೆಂಡ್ಸ್ ಟ್ರೋಫಿ 2024 ಕ್ರಿಕೆಟ್ ಎಲ್ಲಾ ವಯಸ್ಸಿನವರಿಗೆ ಮಾದರಿಯಾಗಿದೆ. ಟೀಮ್ ವರ್ಕ್, ಫಿಟ್‌ನೆಸ್ ಮತ್ತು ಆಟದ ಸಂತೋಷವನ್ನು ಆಚರಿಸಲು ಹಿರಿಯ ವೈದ್ಯಕೀಯ ವೃತ್ತಿಪರರನ್ನು ಒಂದೆಡೆ ಒಗ್ಗೂಡಿಸಿದೆ ಈ ಲೆಜೆಂಡ್ಸ್ ಲೀಗ್.