ಉಡುಪಿ :ನವೆಂಬರ್ 25:ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ 48 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಇದೀಗ ಇಂದಿನಿಂದ ಶ್ರೀಹಂಡೆದಾಸಪ್ರತಿಷ್ಠಾನದ ಸಹಯೋಗದೊಂದಿಗೆ ಶ್ರೀಮತಿ ರುಕ್ಮಿಣಿ ಹಂಡೆ ಇವರ ಸಹಕಾರದೊಂದಿಗೆ ೧೮ ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮ ಇಂದಿನಿಂದ ಪಾರಂಭ ಗೊಂಡಿತು.
ಪೂಜ್ಯ.ಕಿರಿಯ ಶ್ರೀಪಾದರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ನಶಿಸುತ್ತಿರುವ ಈ ಅಪೂರ್ವ ಕಲೆಯನ್ನು ಉಳಿಸುವಲ್ಲಿ ಶ್ರೀಮತಿ ಹಂಡೆಯವರ ಪ್ರಯತ್ನ ಅನುಕರಣೀಯವಾಗಿದೆ.
ಭಗವದ್ಗೀತೆಯ ಮೇಲಿನ ಹರಿಕಥೆಯ ಪ್ರಥಮ ಪ್ರಯೋಗ ನಮ್ಮ ವಿಶ್ವಗೀತಾಪರ್ಯಾಯದಲ್ಲಿ ನಡೆಯುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ. ಈ ಮೂಲಕವೂ ಗೀತೆಯ ಪ್ರಚಾರ ನಡೆಯುವಂತಾಗಲಿ ಎಂದು ಹರಸಿದರು.
ಪ್ರತಿಷ್ಠಾನದ ಶ್ರೀ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು.ಶ್ರೀ ಸಗ್ರಿ ವೇದವ್ಯಾಸ ಐತಾಳರು ಧನ್ಯವಾದವಿತ್ತರು.
ಶ್ರೀ ಮಧೂರು ಬಾಲಸುಬ್ರಹ್ಮಣ್ಯಂ, ಪ್ರಸನಾಚಾರ್ಯ, ರಮೇಶ್ ಭಟ್, ಉಪ್ಪೂರು ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಇಂದಿಂದಿನಿಂದ ಡಿಸೆಂಬರ್ ೧೨ ರವರೆಗೆ ಸಾಯಂ ೪ರಿಂದ೬ರವರೆಗೆ ಶ್ರೀ ಮಧ್ವಮಂಟಪದಲ್ಲಿ ನಡೆಯಲಿಡೆಯೆಂದು ಶ್ರೀ ಮಠದ ಪ್ರಕಟನೆ ತಿಳಿಸಿರುತ್ತದೆ.