ಕಾರ್ಕಳ:ನವೆಂಬರ್ 23: ಜೋಡು ಕಟ್ಟೆಯ ಕಾರೋಲ್ ಗುಡ್ಡೆ ಬಳಿ ಇಂದು ಶಾಲಾ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ವರದಿ ಆಗಿದೆ.
ಬೆಳಿಗ್ಗೆ ಸುಮಾರು ೭.೩೦ ರ ಹೊತ್ತಿಗೆ ಕಾರ್ಕಳ ಖಾಸಗಿ ಶಾಲಾ ಬಸ್ ಮಕ್ಕಳನ್ನು ಕರೆ ತರಲು ಕಾರೋಲ್ ಗುಡ್ಡೆಗೆ ಹೋಗುತ್ತಿತ್ತು.
ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಅಜಿತ್ ಬೈಕ್ ನಿಯಂತ್ರಣ ಕಳೆದು ಕೊಂಡು ಶಾಲಾ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಜಿತ್ ದೇವಸ್ಥಾನ ಹಾಗೂ ಟೈಲ್ಸ್ ಹಾಕುವ ಕೆಲಸ ಮಾಡಿ ಕೊಂಡಿದ್ದ ಎನ್ನಲಾಗಿದೆ