ಕಾರ್ಕಳ : ನವೆಂಬರ್ 22: ಜಿಲ್ಲಾ ನಗರ ಅಭಿವೃದ್ಧಿ ಇಲಾಖೆ, ಕಾರ್ಕಳ ಪುರಸಭೆ ಆಶ್ರಯದಲ್ಲಿ ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಆಹಾರ ಸಂಸ್ಕರಣೆಯಲ್ಲಿ ತೊಡಗಿಸಿಕೊಳ್ಳಲು ಗುರುವಾರ ಪುರಸಭಾ ಕಾರ್ಯಾಲಯದಲ್ಲಿ ಸಾಲದ ಚೆಕ್ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ
ಯೋಗೇಶ್ ದೇವಾಡಿಗ ಮಾತನಾಡಿ ದೀನ್ ದಯಾಳ್ ಅಂತ್ಯೋದ್ಯಾಯ ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣ ಘಟಕ ಯೋಜನೆ ಅಡಿ ಸಂಬಂಧಪಟ್ಟ, ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಅನುದಾನವನ್ನು ಒದಗಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಉದ್ಯಮ ಘಟಕಗಳನ್ನು ಆರಂಭಿಸಿ ಯಶ್ವಸಿ ಯಾಗಬೇಕು. ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯ ಅಧಿಕಾರಿ ರೂಪ ಶೆಟ್ಟಿ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಸ್ವಾವಲಂಬಿಯಾಗಲು ಸರಕಾರ13.60 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಹಪ್ಪಳ, ಸಂಡಿಗೆ, ಇನ್ನಿತರ ಕ್ಯಾಟರಿಂಗ್ ಉತ್ಪಾದನೆ ಘಟಕಗಳಿಗೆ ಉತ್ಪಾದಿಸಲಾಗುತ್ತದೆ.ಈ ಅನುದಾನವನ್ನು ಸಮರ್ಪಕವಾಗಿ ಸ್ವಾವಲಂಬಿ ಚಟುವಟಿಕೆ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
34 ಮಂದಿ ಮಹಿಳಾ ಪಲಾನುಭವಿ ಗಳಿಗೆ ತಲಾ 40,000 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು. ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು. ಸಮುದಾಯ ಸಮನ್ವಯ ಅಧಿಕಾರಿ ಈಶ್ವರ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.