ಉದ್ಯಾವರ : ನವೆಂಬರ್ 22: ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲಕ ರಘುನಾಥ ಎಂ ಸಾಲಿಯಾನ್ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬೊಳ್ಜೆ ಬ್ರಹ್ಮ ಬೈದ್ರಕಳ ಗರಡಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕೇದಾರ್ ಬ್ರಹ್ಮಲಿಂಗೇಶ್ವರ ಕಲಾಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು ಇಬ್ಬರು ಪುತ್ರರು, ನಾಲ್ಕು ಪುತ್ರಿಯಂದಿರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.