ಬೆಳ್ತಂಗಡಿ: ನವೆಂಬರ್ 22:ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಸೇವಾ ಬಯಲಾಟದ ತಿರುಗಾಟ ನ.21ರಂದು ಬೆಳಗ್ಗೆ ಕ್ಷೇತ್ರದ ಶ್ರೀ ಛತ್ರ ಗಣಪತಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡಿತು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಕ್ಷೇತ್ರದ ಸಕಲ ಗೌರವದೊಂದಿಗೆ ಶ್ರೀ ಮಹಾಗಣಪತಿಯನ್ನು ಮೆರವಣಿಗೆಯಲ್ಲಿ ಶ್ರೀ ಮಂಜುಕೃಪಾ ಮಣೆಗಾರರ ಮನೆಗೆ ಕರೆತರಲಾಯಿತು.
ಮುಂದಿನ ಪತ್ತನಾಜೆ ವರೆಗೆ ಮೇಳವು ಕರಾವಳಿ, ದಕ್ಷಿಣೋತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಲಮಿತಿಯಲ್ಲಿ ಪೌರಾಣಿಕ ಪ್ರಸಂಗದ ಮೂಲಕ ಪ್ರದರ್ಶಿಸಲಿದೆ.