ಕುಂಭಾಶಿ :ನವೆಂಬರ್ 22:ಹಿಮ್ಮುಖ ಚಲಿಸುತ್ತಿದ್ದ ಇನ್ನೋವಾ ಕಾರಿಗೆ ಹಿಂದಿನಿಂದ ಅತೀ ವೇಗದಿಂದ ಇನ್ಸುಲೇಟರ್ ಲಾರಿ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಬುಧವಾರ ಕುಂಭಾಶಿ ರಾ.ಹೆ. 66ರಲ್ಲಿ ಸಂಭವಿಸಿತ್ತು
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇರಳದ ಪಯ್ಯನೂರು ಮೂಲದ ನಾರಾಯಣನ್, ವಾತ್ಸಲ, ಅನಿತಾ, ಚೈತ್ರಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯ ವಾಗಿದೆ
ಇನ್ನುಳಿದ ಗಾಯಾಳು ಮಧುಸೂದನ್, ಭಾರ್ಗವನ್, ಚಾಲಕ ಫೈಝಲ್ ಹಾಗೂ ಇನ್ಸುಲೇಟರ್ ಚಾಲಕ ಹೊನ್ನಾವರದ ಮಹೇಶ್ ಗಾಯಾಳುಗಳು ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಗಾಯಾಳುಗಳು ಪ್ರಾಣಾಪಾಯದಿಂದ ಪಾರಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯ ವಾಗಿದೆ
ಅಪಘಾತವಾದ ತತ್‌ಕ್ಷಣ ಸ್ಥಳೀಯರು ಕೂಡಲೇ ಸ್ಪಂದಿಸಿ ಗಾಯಾಳುಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದೇ ಗಾಯಾಳುಗಳು ಬದುಕುಳಿಯಲು ಸಾಧ್ಯವಾಯಿತು ಎನ್ನಲಾಗಿದೆ.