ಹೆಬ್ರಿ: ನವೆಂಬರ್ 22: ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದ ಕಾರಣ ಮುಂಜಾಗ್ರತಾ ಕ್ರಮವಾಗಿ ಕೂಡ್ಲು ಜಲಪಾತಕ್ಕೆ ಒಂದು ವಾರಗಳ ಕಾಲ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಕೂಡ್ಲು ಫಾಲ್ಸ್ ಪ್ರದೇಶದಲ್ಲೇ ನಕ್ಸಲ್ ಚಟುವಟಿಕೆ ಮತ್ತೆ ಬಿರುಸುಗೊಂಡಿರುವುದು ಹಾಗೂ ನಕ್ಸಲ್ ನಿಗ್ರಹ ಪಡೆಯವರಿಂದ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡನ ಮನೆ ಜಲಪಾತದ ಸಮೀಪದಲ್ಲೇ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಜಲಪಾತಕ್ಕೆ ಪ್ರವೇಶ ಇಲ್ಲ ಎಂದು ಸೋಮೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಂ ಬಾಬು ತಿಳಿಸಿದ್ದಾರೆ.