ಮಣಿಪಾಲ: ನವೆಂಬರ್ 14: ಮಣಿಪಾಲ ಠಾಣೆ ಪೊಲೀಸರು ಅಸುರಕ್ಷಿತವಾಗಿ ಡಾಮರು, ಜಲ್ಲಿ ಸಾಗಿಸುತ್ತಿದ್ದ ಕೇರಳ ನೋಂದಣಿಯ ಲಾರಿಯನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಜಲ್ಲಿ ತುಂಬಿಸಿಕೊಂಡು ಪೆರಂಪಳ್ಳಿ ರಸ್ತೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಜಲ್ಲಿಗಳು ರಸ್ತೆಗೆ ಬಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ತೆರಳಿದ ಪೊಲೀಸರು ಅಂಬಾಗಿಲು ಕಡೆಗೆ ಹೋಗುತಿದ್ದ ಈ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದ್ದರು.
ಚಾಲಕ ಸೂಚನೆ ಧಿಕ್ಕರಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದ. ಲಾರಿಯನ್ನು ಬೆನ್ನಟ್ಟಿ ಕಕ್ಕುಂಜೆ ರೈಲ್ವೇ ಸೇತುವೆಯ ಬಳಿ ಲಾರಿಯನ್ನು ಅಡ್ಡಗಟ್ಟಿ ಪೊಲೀಸರು ನಿಲ್ಲಿಸಿದ್ದಾರೆ.
ಲಾರಿ ಚಾಲಕ ಸಂಗನಗೌಡ ಪಾಟೀಲ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.