ಉಡುಪಿ : ನವೆಂಬರ್ 10: ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಉರಿಯದ ದೀಪ, ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ಪಾದಾಚಾರಿ ಸಮಸ್ಯೆ, ಸ್ಥಳೀಯ ಸಂಘ ಸಂಸ್ಥೆ ಸೇರಿದಂತೆ ಇತರ ವಾಹನಗಳಿಗೆ ವಿಧಿಸುತ್ತಿರುವ ಟೋಲ್ ಸುಂಕ. ಇವೆಲ್ಲವನ್ನೂ ವಿರೋಧಿಸಿ 09 ನವೆಂಬರ್ ಶನಿವಾರ ಸಾಸ್ತಾನ ಟೋಲ್ ಗೇಟ್ ಎದುರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು
ಟೋಲ್ ಪ್ರತಿಭಟನೆ ತೀವ್ರ ಸ್ವರೂಪ ತಾಳಿದಾಗ ಬ್ರಹಾವರ ಸರ್ಕಲ್ ದಿವಾಕರ್ ಅವರು ಮಧ್ಯಸ್ಥಿಕೆ ವಹಿಸಿ ಟೋಲ್ ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ತಿಳಿ ಗೊಳಿಸಿದರು.
ಟೋಲ್ ಕಂಪನಿಯ ಸಿಬ್ಬಂದಿಗಳ ಹೇಳಿಕೆಗೆ ಆಕ್ರೋಶಗೊಂಡ ಸಮಿತಿ ಹಾಗೂ ಪ್ರತಿಭಟನಾಕಾರರನ್ನು ಪೋಲಿಸ್ ಇಲಾಖೆ ಮಧ್ಯಸ್ಥಿಕೆಯೊಂದಿಗೆ ತಿಳಿಗೊಳಿಸಿತ್ತಾದ್ದರೂ ಟೋಲ್ ಮುಖ್ಯಸ್ಥರೊಂದಿಗೆ ಬ್ರಹ್ಮಾವರದ ಸರ್ಕಲ್ ದಿವಾಕರ್ ಮಾತುಕತೆ ನಡೆಸಿ ಸೋಮವಾರ ತಹಶಿಲ್ದಾರರ್ ಕಛೇರಿಯಲ್ಲಿ ಸಭೆ ಆಯೋಜಿಸಲು ತಿರ್ಮಾಸಿ ಹೆದ್ದಾರಿ ಸಮಿತಿಗೆ ತಿಳಿಸಿದರು.
ಈ ಹಿಂದೆ ಕೂಡ ಇದೇ ರೀತಿಯಲ್ಲಿ ಸ್ಥಳೀಯರು ಟೋಲ್ ಸಮಸ್ಯೆ ಕುರಿತಾಗಿ ಪ್ರತಿಭಟನೆ ಮಾಡಿದ್ರು ನಂತರ ತಹಸೀಲ್ದಾರ್ ಕಚೇರಿ ಯಲ್ಲಿ ಸಭೆ ನಡೆಸಲಾಗಿತ್ತು ಆದ್ರೆ ಇದೀಗ ಅದೇ ರೀತಿಯಲ್ಲಿ ಸನ್ನಿವೇಶ ನಿರ್ಮಾಣ ಗೊಂಡಿದ್ದು, ಸ್ಥಳೀಯರ ಸಮಸ್ಯೆ, ಬೇಡಿಕೆಗಳು ಈಡೇರುತ್ತಾ ಅಂತ ಕಾದು ನೋಡ ಬೇಕಾಗಿದೆ.