ಉಡುಪಿ:ನವೆಂಬರ್ 08:ಉಡುಪಿಯ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಾ ಇದ್ದು ಇತ್ತೀಚಿಗೆ ಸ್ವಲ್ಪ ವೇಗ ಪಡೆದು ಕೊಂಡಿದೆ .
ಈ ಮದ್ಯೆ ಕಾಮಗಾರಿ ನಡೆಯುತ್ತಿರುವ ವೇಳೆ ಕ್ರೈನ್ ವೊಂದು ತಲೆಕೆಳಗಾಗಿ ಬಿದ್ದಿದೆ, ಎಡಮಗ್ಗಲಿನ ಎತ್ತರದ ರಸ್ತೆಯಿಂದ ಬಲ ಮಗ್ಗುಲಿನಲ್ಲಿರುವ ತಗ್ಗು ರಸ್ತೆಗೆ ಈ ಕ್ರೈನ್ ಬಿದ್ದಿದ್ದರೆ ಭಾರಿ ಅಪಾಯ ಸಂಭವಿಸುತ್ತಿತ್ತು.
ವಾಹನಗಳು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಕಂಡು ಬಂದ ಅಪಾಯಕಾರಿ ಸನ್ನಿವೇಶ ಜನರಲ್ಲಿ ಆತಂಕ ಸೃಷ್ಟಿಸಿತ್ತು ಬಳಿಕ ತಲೆ ಕೆಳಗಾಗಿ ಬಿದ್ದ ಕ್ರೈನನ್ನು ಬೃಹತ್ ಗಾತ್ರದ ಮತ್ತೊಂದು ಕ್ರೈನ್ ಮೂಲಕ ಎತ್ತಲಾಯಿತು.
ಉಡುಪಿಯ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿ ಅನ್ನೋದು ನಮ್ಮ ಆಶಯ