ಉಡುಪಿ : ನವೆಂಬರ್ 06:ಕಲೌ ಸಂಕೀರ್ತನಪ್ರಾಯೈ: ಯಜಂತಿ ಸ್ಮ ಸುಮೇಧಸ: ಎಂಬ ಭಾಗವತದ ಸಂದೇಶದಂತೆ ಕಲಿಯುಗದಲ್ಲಿ ಸಂಕೀರ್ತನ ಯಜ್ಞ ಬಹು ಮುಖ್ಯವಾಗಿದೆ.
ಅತಿ ಸುಲಭವಾಗಿ ಭಗವಂತನ ಪರಮಾನುಗ್ರಹವನ್ನು ಪಡೆಯಲು ಸುಲಭ ಮಾರ್ಗವಾಗಿದೆ. ಈ ಪವಿತ್ರವಾದ ಯಜ್ಞದ ಮಹತ್ವವನ್ನು ಶ್ರೀವಾದಿರಾಜಗುರುಸಾರ್ವಭೌಮರು ಜನಸಾಮಾನ್ಯರಲ್ಲಿ ಸ್ಫೂರ್ತಿ ತುಂಬಿದರು. ಇದರ ಪ್ರಭಾವದಿಂದ ಸಂಕೀರ್ತನೆ ಇಂದು ಕರಾವಳಿಯ ಪ್ರದೇಶದಲ್ಲಿ ಮನೆ ಮನೆಗಳಲ್ಲಿ ವ್ಯಾಪಕವಾಗಿ ಕಂಗೊಳಿಸುತ್ತಿದೆ.
ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸಾರ್ವಜನಿಕರೂ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗಬೇಕೆಂಬ ಕಳಕಳಿಯಿಂದ ಈ ಸಂಕೀರ್ತನಾ ಯಜ್ಞವನ್ನು ಸಂಕಲ್ಪಿಸಿ ಗೀತಾಮಂದಿರದ ಮುಂಭಾಗದಲ್ಲಿ ತುಳಸೀ ಸಂಕೀರ್ತನೆಯನ್ನು ಉದ್ಘಾಟಿಸಿದರು.
ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿದ್ದರು. ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಕೀರ್ತನೆ ನಡೆಯಿತು. ಅನೇಕ ಭಕ್ತರು ಭಾಗವಹಿಸಿದ್ದರು.