ಬ್ರಹ್ಮಾವರ :ಅಕ್ಟೋಬರ್ 29:ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್ ವಾದಿ) ಸಿಪಿಐಎಂ 24 ನೇ ಉಡುಪಿ ವಲಯ ಸಮ್ಮೇಳನವು ಕಾಂ.ರಾಜು ಪೂಜಾರಿ ವೇದಿಕೆ, ಕಾಂ.ಟಿ.ಅಂಗರ ಸಭಾಂಗಣ, ತುಂಗಾ ನಾರಾಯಣ ಸಂಕೀರ್ಣ, ಬ್ರಹ್ಮವರ ದಲ್ಲಿ ನಡೆಯಿತು ಧ್ವಜಾರೋಹಣ ವನ್ನು ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಪಿ.ವಿಶ್ವನಾಥ ರೈ ಯವರು ನೇರವೆರಿಸಿದರು.ನಂತರ ಎಲ್ಲಾ ಮುಖಂಡರು, ಸದಸ್ಯರು ಅಗಲಿದ ಸಂಗಾತಿಗಳಿಗೆ ಹುತಾತ್ಮ ಸ್ಮಾರಕ ಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಸಮ್ಮೇಳನವನ್ನು ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಕಾಂ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಎಚ್.ನರಸಿಂಹ, ವೆಂಕಟೇಶ್ ಕೋಣಿ,ಹಾಗೂ ಪಕ್ಷದ ಹಿರಿಯ ಮುಖಂಡರಾದ ಬರಹಗಾರ, ಚಿಂತಕರು ಆದ ಅದಮಾರು ಶ್ರೀ ಪತಿ ಆಚಾರ್ಯ ಭಾಗವಹಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಂ.ಕೆ.ವಿಶ್ವನಾಥ ವಹಿಸಿದ್ದರು.3ವರ್ಷದ ವರದಿಯನ್ನು ಪಕ್ಷದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೋಲ್ಲ ಮಾಡಿದರು.ಶ್ರಾದ್ದಾಂಜಲಿ ಯನ್ನು ಕಾಂ. ಸರೋಜ ರವರು ಓದಿ ಹೇಳಿದರು. ಸ್ವಾಗತವನ್ನು ಕಾಂ.ಕವಿರಾಜ್. ಎಸ್ ಹಾಗೂ ವಂದನಾರ್ಪಣೆಯನ್ನು ಶಶಿಧರ ಗೋಲ್ಲ ಮಾಡಿದರು.
ಠರಾವುಮಂಡನೆ
ಬೀಡಿ ಕಾರ್ಮಿಕರ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ, ಮೆಲ್ಸೇತುವೆ ,ಅವೈಜ್ಞಾನಿಕ ರಸ್ತೆ ಗಳ ಸಮಸ್ಯೆ ಕಟ್ಟಡ ಕಾರ್ಮಿಕರ ಮರಳು,ಸಿಮೆಂಟ್, ಕಬ್ಬಿಣದ ಬೇಲೆಎರಿಕೆ ಕುರಿತು ಬ್ರಹ್ಮವರ ಸಮುದಾಯದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸಿ ಬಡಜನರ ರೇಶನ್ ಕಾರ್ಡ್ ರದ್ದತಿ ಕುರಿತು ಒಟ್ಟು 5 ನಿರ್ಣಯವನ್ನು ಪಕ್ಷದ 24 ಸಮ್ಮೇಳನದಲ್ಲಿ ಮಂಡಿಸಲಾಯಿತು.
ಪಕ್ಷದ ನೂತನ ಸಮಿತಿ ಸಿಪಿಐಎಂ ಪಕ್ಷದ ಉಡುಪಿ ವಲಯ ಸಮಿತಿ ಮುಂದಿನ 3ವರ್ಷಕ್ಕೆ 9 ಜನರ ನೂತನ ಸಮಿತಿ ಆಯ್ಕೆ ಮಾಡಲಾಯಿತು
ಪ್ರಧಾನ ಕಾರ್ಯದರ್ಶಿ-ಶಶಿಧರ ಗೋಲ್ಲ ಸಮಿತಿ ಸದಸ್ಯರು ಕೆ.ವಿಶ್ವನಾಥ ಕವಿರಾಜ್. ಎಸ್.ಕಾಂಚನ್ ಉಮೇಶ್ ಕುಂದರ್ ರಾಮ ಕಾರ್ಕಡ ಸರೋಜ.ಎಸ್ ನಳಿನಿ.ಎಸ್ ಸೈಯದ್ ಅಲಿ,ರಮೇಶ್, ಉಡುಪಿ ಉಪಸ್ಥಿತರಿದ್ದರು