ಉಡುಪಿ:ಅಕ್ಟೋಬರ್ 29:ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವನ್ನು ವಿರೋಧಿಸಿ ಇಂದು (ಅ. 29) ರಂದು ಇಂದ್ರಾಳಿ ಬ್ರಿಡ್ಜ್ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ವಿಶೇಷ ವಾಗಿ ಇಂದ್ರಾಳಿ ಶಾಲಾ ಮಕ್ಕಳು ಕೂಡ ಈ ಪ್ರತಿಭಟನೆ ಯಲ್ಲಿ ಭಾಗವಹಿಸಿ ದಿನನಿತ್ಯ ತಾವು ಅನುಭವಿಸುತ್ತಿರುವ ಸಮಸ್ಯೆ ಗಳ ಕುರಿತು ತಮ್ಮ ಅಳಲನ್ನ ತೋಡಿಕೊಂಡ್ರು
ಉಡುಪಿ ಜಿಲ್ಲೆಯ ಎಲ್ಲ ನಾಗರಿಕರ ಸಮಸ್ಯೆ. ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ಮಸೀದಿ, ರೈಲ್ವೆ ನಿಲ್ದಾಣ, ಪ್ರತಿಷ್ಠಿತ MGM ಕಾಲೇಜು ಇದೆ. ಅಲ್ಲಿ ಬರುವ ಜನರಿಗೆ ಅಪಘಾತವಾಗುವ ಭಯದ ವಾತಾವರಣವಿದೆ.
ಈ ಸಮಸ್ಯೆಯಿಂದ ನಾಗರಿಕರು ಬೆಸೆತ್ತಿ ಹೋಗಿದ್ದು ಅದಕ್ಕಾಗಿ ಕಾಂಗ್ರೆಸ್ ಮುಖಂಡರು , ಸಾಮಾಜಿಕ ಹೋರಾಟಗಾರರು ಸೇರಿ ಸೇತುವೆ ಬಳಿ ಸುಮಾರು ಎರಡು ಗಂಟೆ ಗಳ ಕಾಲ ಪ್ರತಿಭಟನಾ ಸಭೆ ನಡೆಸಿದರು
ಜನವರಿ ಅಂತ್ಯದ ಒಳಗೆ ಈ ಸೇತುವೆಯನ್ನು ಜನ ಬಳಕೆಗೆ ಬಿಡಬೇಕು ಎಂಬುವುದು ನಮ್ಮ ಬೇಡಿಕೆ. ರೈಲ್ವೆ ಸಚಿವರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸುತ್ತೇವೆ.ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ರೈಲ್ವೆ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿದೆ ಎಂದರು.
ನಮ್ಮ ಬೇಡಿಕೆ ಕ್ಲಪ್ತ ಸಮಯದಲ್ಲಿ ಈಡೇರದಿದ್ದರೆ ಜನವರಿ 3೦ ಕ್ಕೆ ದೊಡ್ಡ ಹೋರಾಟ ಸಂಘಟಿಸಲಾಗುವುದು. ಧರಣಿ , ಸಂಸದರ ಮನೆಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟ ಸಂಘಟಿಸುತ್ತೇವೆ ಅದಕ್ಕಿಂತ ಮುನ್ನ ಸರಕಾರ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕರಾರು ಆಗ್ರಹಿಸಿದರು.
ಇಲ್ಲಿ ದಿನನಿತ್ಯ ವಾಹನ ಸಂಚಾರ ಬಹಳ ಕಷ್ಟಕರವಾಗಿದ್ದು ಅದರಲ್ಲೂ ಶಾಲೆಗೆ ತೆರಳಲು ಮಕ್ಕಳಿಗೆ ರಸ್ತೆದಾಟಲು ಬಹಳ ತೊಂದರೆಯಾಗಿದೆ ಬಹಳಷ್ಟು ಸಮಯದಿಂದ ಈ ಸಮಸ್ಯೆ ಮುಂದುವರಿದುಕೊಂಡು ಬರುತ್ತಿದ್ದು ಕಾಮಗಾರಿ ಮುಗಿಯುವವರೆಗೆ ಮಕ್ಕಳಿಗೆ ರಸ್ತೆ ದಾಟಲು ಅನುವು ಮಾಡಿ ಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಟ್ರಾಫಿಕ್ ಸಿಬ್ಬಂದಿಯ ನೇಮಕಮಾಡಿದಲ್ಲಿ ಒಂದಷ್ಟು ಆಗುವ ಅನಾಹುತಗಳನ್ನು ತಪ್ಪಿಸಬಹುದು ಅನ್ನೋದು ನಮ್ಮ ಅಭಿಪ್ರಾಯ ಕೂಡ