ಉಡುಪಿ: ಅಕ್ಟೋಬರ್ 27:ನಗರಸಭೆಯ ಮೂಡು ಸಗ್ರಿ ವಾರ್ಡಿನ ಚಕ್ರತೀರ್ಥ ಬಳಿ ಸುಮಾರು 13.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸೇತುವೆ ಇಂದು ಉದ್ಘಾಟಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಳೆಗಾಲದ ಅವಧಿಯಲ್ಲಿ ಹಳೆ ಸೇತುವೆ ಕುಸಿತಗೊಂಡ ಹಿನ್ನಲೆಯಲ್ಲಿ ನಗರಸಭೆಯ ಅನುದಾನದ ಮೂಲಕ ಅನುದಾನ ಮಂಜೂರು ಮಾಡಿ ನೂತನ ಸೇತುವೆಯನ್ನು ಇಂದು ಲೋಕಾರ್ಪಣೆ ಯಾಗಿದ್ದು, ಸಗ್ರಿ ವಾರ್ಡಿನ ಇನ್ನೊಂದು ಸೇತುವೆಯ ಕಾಮಗಾರಿಯು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.
ಈಗಾಗಲೇ ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಚರಂಡಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಸುಮಾರು 5 ಕೋಟಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಈಗಾಗಲೇ ಲೋಕೋಪಯೋಗಿ ಇಲಾಖೆಯ ರಸ್ತೆಗಳ ತುರ್ತು ನಿರ್ವಹಣೆ ತುರ್ತಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ್, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಗಣ್ಯರಾದ ಶ್ರೀ ವೇದವ್ಯಾಸ ಐತಾಳ್, ಶ್ರೀ ರವಿ ಐತಾಳ್, ಸ್ಥಳೀಯ ಮುಖಂಡರಾದ ಶ್ರೀ ಸಂತೋಷ್ ಆಚಾರ್ಯ, ಶ್ರೀ ಪ್ರಶಾಂತ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.