ಉಡುಪಿ :ಅಕ್ಟೋಬರ್ 23:ಟೀಮ್ ಈಶ್ವರ್ ಮಲ್ಪೆ ನೇತೃತ್ವದಲ್ಲಿ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಅಕ್ಟೋಬರ್ 25 ಮತ್ತು 26 ರಂದು ಉಡುಪಿಯ ವಿಘ್ನಹರ್ತ ಶ್ರವಣ ಚಿಕಿತ್ಸಾಲಯದಲ್ಲಿ ಆಯೋಜಿಸಲಾಗಿದೆ
ಟೀಮ್ ಈಶ್ವರ್ ಮಲ್ಲೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ನಾವು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಹಮಿಕೊಳ್ಳಲಾಗಿದೆ
ಟೀಮ್ ಈಶ್ವರ್ ಮಲ್ಪೆಯವರು ಶ್ರವಣದ ಯಂತ್ರಕ್ಕೆ (Hearing Machine) ತಗಲುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವವರು ಇದರ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9902344399 ಸಂಪರ್ಕಿಸಿ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.