ನವದೆಹಲಿ, ಅಕ್ಟೋಬರ್ 23: ಈ ಹಿಂದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ವಿಧಿಸಿದ್ದ ನಿರ್ಬಂಧದಿಂದಾಗಿ ಪೇಟಿಎಂ ಸಂಸ್ಥೆ ಹೊಸ ಯುಪಿಐ ಗ್ರಾಹಕರನ್ನು ಹೊಂದಲು ಅಸಾಧ್ಯವಾಗಿತ್ತು. ಇದೀಗ ಹೊಸ ಯುಪಿಐ ಬಳಕೆದಾರರನ್ನು ಹೊಂದುವ ಅವಕಾಶ ಪಡೆದಿದೆ. ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ (ಎನ್ಪಿಸಿಐ) ಪೇಟಿಎಂಗೆ ಈ ಅನುಮತಿ ನೀಡಿದೆ .
ಆದರೆ, ಎನ್ಪಿಸಿಐ ಪೇಟಿಎಂಗೆ ನೀಡಿರುವ ಅನುಮತಿಯಲ್ಲಿ ಹಲವು ಷರತ್ತುಗಳಿವೆ
ಕಾಲಕಾಲಕ್ಕೆ ಹೊರಡಿಸಲಾಗುವ ಎಲ್ಲಾ ನಿಯಮಾವಳಿಗಳಿಗೂ ಪೇಟಿಎಂ ಬದ್ಧವಾಗಿರಬೇಕು ಎಂಬುದು ಎನ್ಪಿಸಿಐ ವಿಧಿಸಿರುವ ಪ್ರಮುಖ ಷರತ್ತಾಗಿದೆ.
‘ಕಂಪನಿಗೆ ಹೊಸ ಯುಪಿಐ ಬಳಕೆದಾರರನ್ನು ಪಡೆಯಲು ಎನ್ಪಿಸಿಐ ಅನುಮೋದನೆ ನೀಡಿ ಪತ್ರ ಬರೆದಿದೆ. ಎನ್ಪಿಸಿಐನ ಎಲ್ಲಾ ವೈಧಾನಿಕ ಮಾರ್ಗಸೂಚಿ ಮತ್ತು ಸುತ್ತೋಲೆಗಳಿಗೆ ಬದ್ಧವಾಗಿರಬೇಕೆಂದು ಸೂಚಿಸಿದೆ,’ ಎಂದು ಪೇಟಿಎಂ ಸಂಸ್ಥೆ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.