ಬೆಂಗಳೂರು :ಅಕ್ಟೋಬರ್ 22:ಕರ್ನಾಟಕದ ಹೆಮ್ಮೆಯ ನಂದಿನಿ ಈಗ ದೆಹಲಿಗೂ ಕಾಲಿಡುತ್ತಿದೆ. ಇದೇ ಅಕ್ಟೋಬರ್.27, 28ರಂದು ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಇದೇ ಅಕ್ಟೋಬರ್ 27 ಹಾಗೂ 28 ರಂದು ನಂದಿನಿಯ ಮಾರಾಟ ಮಳಿಗೆ ದೆಹಲಿಯಲ್ಲಿ ಉದ್ಘಾಟನೆಯಾಗಲಿದೆ. ಅಲ್ಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ (ಮನ್‌ಮುಲ್) ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳನ್ನು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ. ಕರ್ನಾಟಕದ ಜಿಲ್ಲೆ, ತಾಲ್ಲೂಕು ವಿಭಾಗದಲ್ಲೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದಾವೆ. ಈಗ ದೆಹಲಿಯಲ್ಲೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಓಪನ್ ಆಗಲಿದೆ. ಈ ಮೂಲಕ ದೆಹಲಿಯಲ್ಲೂ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಆಗಲಿದೆ.