ಪೊಳಲಿ: ಅಕ್ಟೋಬರ್ 21:ನವರಾತ್ರಿ ಸಂದರ್ಭದಲ್ಲಿ ತಮ್ಮ ಸಂತೋಷಕ್ಕೆ ವೇಷವನ್ನು ಹಾಕಿ ಕುಣಿಯುವವರನ್ನು ಸಾಕಷ್ಟು ಜನ ಇದ್ದಾರೆ.ಆದರೆ ಸಾವಿರ ಸೀಮೆಯ ಒಡತಿಯ ಪರಿಸರದಲ್ಲಿ ಹೆಲ್ಪಿಂಗ್ ಪ್ರೆಂಡ್ಸ್ ಪೊಳಲಿ ಎನ್ನುವ ಒಂದು ಯುವಕರ ತಂಡ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿಚಿತ್ರ ವೇಷವನ್ನು ಧರಿಸಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗಾಗಿ ನೆರವಾಗಿದ್ದಾರೆ..
ಹೆಲ್ಪಿಂಗ್ ಪ್ರೆಂಡ್ಸ್ ಪೊಳಲಿ ಎನ್ನುವ ಒಂದು ತಂಡ ಸರಿಸುಮಾರು 3ವರುಷದಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಹಾಗು ಜಾತ್ರ ಸಮಯದಲ್ಲಿ ವಿಚಿತ್ರ ವೇಷವನ್ನು ಧರಿಸಿ ಭವತಿ ಭಿಕ್ಷಾಂದೇಹಿ ಎನ್ನುವ ಕಾರ್ಯಕ್ರಮವನ್ನು ರೂಪಿಸಿ ಕ್ಷೇತ್ರಕ್ಕೆ ಬರುವ ಭಕ್ತರು ನೀಡುವ ಹಣವನ್ನು ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡುತ್ತಿದ್ದಾರೆ.ಅದೇ ರೀತಿ ಈ ವರುಷ ನವರಾತ್ರಿ ಸಂದರ್ಭದಲ್ಲಿ ಕೂಡ ವಿಚಿತ್ರ ವೇಷ ದರಿಸಿ ಭಕ್ತರು ನೀಡಿದ ಹಣವನ್ನು ಸಂಗ್ರಹಿಸಿ ಎಡಪದವು ಬೋರುಗುಡ್ಡೆ ನಿವಾಸಿಯಾಗಿರುವ ವೇದಾವತಿ ಹಾಗು ಉಮಾನಾಥ ದಂಪತಿಗಳ ಮಗನಾದ 10 ವರುಷದ ಯೋಗೀಶ್ ಎಂಬ ಮಗುವಿಗೆ ಬ್ಲಡ್ ಕಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಸುಮಾರು 8ಲಕ್ಷ ಹಣ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದಾಗ ಬಡ ಕುಟುಂಬ ದಿಕ್ಕು ತೋಚದ ಸಂದರ್ಭದಲ್ಲಿ ಹೆಲ್ಪಿಂಗ್ ಪ್ರೆಂಡ್ಸ್ ಪೊಳಲಿ ತಂಡ ತಕ್ಷಣ ತಮ್ಮಿಂದಾಗುವಷ್ಟು ಧನಸಹಾಯ ಮಾಡುತ್ತೇವೆ ಎಂದು ಮುಂದೆ ಬಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ನವರಾತ್ರಿಯ ಸುಸಂದರ್ಭದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದಲ್ಲಿ ಸಂಗ್ರಹ ಮಾಡಿದ ಒಟ್ಟು 91267 ರೂಪಾಯಿ ಹಣವನ್ನು ಪರಿಸರ ಪಶು ಪ್ರೇಮಿಯಾಗಿರುವ ಶ್ರೀಮತಿ ರಜನಿ ದಾಮೋದರ ಶೆಟ್ಟಿ ಹಾಗು ಸೇಸಪ್ಪ ದೇವಾಡಿಗ ಪೊಳಲಿ(ಗುರುಸ್ವಾಮಿ)ಇವರ ದಿವ್ಯ ಹಸ್ತದಿಂದ ಮಗುವಿನ ಪೋಷಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಕೆಲ ಗಣ್ಯರು ಹಿತೈಷಿಗಳು ಹಾಗು ಹೆಲ್ಪಿಂಗ್ ಪ್ರೆಂಡ್ಸ್ ಪೊಳಲಿ ತಂಡದ ಎಲ್ಲಾ ಸದಸ್ಯರು ಹಾಜರಿದ್ದರು..
ಅದೇ ರೀತಿ ತಂಡವು 3ನೇ ವರುಷದ ಕಾರ್ಯಕ್ರಮದಲ್ಲಿ 5ನೇ ಸೇವಾಯೋಜನೆಯಡಿಯಲ್ಲಿ ಸುಮಾರು 7 ಲಕ್ಷಕಿಂತಲೂ ಅಧಿಕ ಮೊತ್ತವನ್ನು 15 ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಿರುತ್ತಾರೆ