ಉಡುಪಿ.ಅಕ್ಟೋಬರ್ 20:- ಉಡುಪಿ ನಗರದ ಕೆ.ಎಸ್ ಆರ್ ಟಿ.ಸಿ ಬಸ್ ಸ್ಯ್ಟಾಂಡ್ ಬಳಿ ಕಾರೊಂದರಿಂದ ಬಲವಂತವಾಗಿ ದೂಡಲ್ಪಟ್ಟ ಮಹಿಳೆಯನ್ನು ವಿಶುಶೆಟ್ಟಿಯವರು ಸಾರ್ವಜನಿಕರು ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಘಟನೆ ಶನಿವಾರ ರಾತ್ರಿಯಲ್ಲಿ ನಡೆದಿದೆ.
ಮಹಿಳೆ ಮೂಲತಃ ಚಿಕ್ಕಮಗಳೂರಿನ ಸುಮ (45 ವರ್ಷ) ಎಂದು ಹೇಳಿದ್ದು, ರಾತ್ರಿಯ ಹೊತ್ತು ಕಾರಿನಿಂದ ಬಲವಂತವಾಗಿ ಹೊರ ದೂಡಿ ಪರಾರಿಯಾದ್ದು, ಮಹಿಳೆ ನಡು ರಸ್ತೆಯಲಗಲಿಯೇ ಮಲಗಿದ್ದಳು. ಮಾಹಿತಿಯ ಮೇರೆಗೆ ವಿಶುಶೆಟ್ಟಿಯವರು ಮಹಿಳಾ ಪೋಲಿಸರ ಸಹಾಯದಿಂದ ರಕ್ಷಿಸಿದ್ದಾರೆ. ಹೆಚ್ಚಿನ ವಿಷಯ ಮಹಿಳೆಯಿಂದ ಲಭ್ಯವಾಗಿರುವುದಿಲ್ಲ.
ಸಂಬಂಧಿಕರು ಮಹಿಳಾ ಠಾಣೆ ಅಥವಾ ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶು ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ.