ಉಡುಪಿ:ಅಕ್ಟೋಬರ್ 19:ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿದೆಡೆ ಗಳಲ್ಲಿ ಗೂಡುದೀಪಗಳ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಲಾಗಿದೆ ನೀವು ಭಾಗವಹಿಸಿ. ಎಲ್ಲಿ ಯಾವಾಗ?ಇಲ್ಲಿದೆ ಮಾಹಿತಿ…
ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ
ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲಾ ಮಟ್ಟದ ಗೂಡುದೀಪಗಳ ಸ್ಪರ್ಧೆಯನ್ನು ಅಕ್ಟೋಬರ್ 27 ರಂದು ಬೋರ್ಡ್ ಶಾಲಾ ಮೈದಾನ (ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಸ್ಪರ್ಧೆಗಳು ಎರಡು ವಿಭಾಗಗಳಲ್ಲಿ ಸಾಂಪ್ರದಾಯಿಕ ಗೂಡುದೀಪ ಹಾಗೂ ಆಧುನಿಕ ಗೂಡು ದೀಪ ನಡೆಯಲಿದ್ದು ಎಲ್ಲಾ ವಿಭಾಗಳಲ್ಲಿ ಪ್ರತ್ಯೇಕ ಬಹುಮಾನಗಳಿರುತ್ತವೆ. ಅಕ್ಟೋಬರ್ 27 ರಂದು ಬೋರ್ಡ್ ಶಾಲಾ ಮೈದಾನ (ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿಯಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು ದೂರವಾಣಿ ಸಂಖ್ಯೆ: 7090460951ಕ್ಕೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡುವೂರು
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ.ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ. ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡವೂರು ಎಪಿಎಂಸಿ ರಕ್ಷಣಾ ಸಮಿತಿ ಉಡುಪಿ. ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಾಂಪ್ರದಾಯಕ ಕಡ್ಡಿಯಿಂದ ಮಾಡಿದ ಗೂಡು ದೀಪಗಳನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಪ್ರದಾಯಕ ಗೂಡುದೀಪ ಸ್ಪರ್ಧೆ.ಗೂಡುದೀಪ ಪ್ರದರ್ಶನ ಮತ್ತು ಮಾರಾಟ. ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡುವೂರಿ ನಲ್ಲಿ 27 ಅಕ್ಟೋಬರ್ 2024 ಶುಕ್ರವಾರ ಬೆಳಗ್ಗೆ 8:30 ರಿಂದ.ಕೆ ವಿಜಯ್ ಕೊಡವೂರು ಸಂಯೋಜನೆ ಯಲ್ಲಿ ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಮಾಹಿತಿಗಾಗಿ ತಾರಾ ಸತೀಶ್. 9449920191 ರಂಜಿತ್ 7676213368 ಸಂಪರ್ಕಿಸಬಹುದು
ಮಣಿಪಾಲದ ತಪೋವನದ ವತಿಯಿಂದ ಗೂಡುದೀಪಗಳ ಸ್ಪರ್ಧೆ
ಮಣಿಪಾಲದ ತಪೋವನದ ವತಿಯಿಂದ ಗೂಡುದೀಪಗಳ ಸ್ಪರ್ಧೆ ಯೊಂದು ಅ.26 ಮತ್ತು 27ರಂದು ಮಣಿಪಾಲ ಅಲೆವೂರು ರಸ್ತೆಯ ಹಸ್ತಶಿಲ್ಪ ವಸ್ತು ಸಂಗ್ರಹಾಲಯದ ಎದುರಿನ ಪ್ರಗತಿ ಪ್ರೈಡ್ ಕಟ್ಟಡದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವೇ ಮನೆಯಲ್ಲಿ ತಯಾರಿಸಿದ ಗೂಡುದೀಪವನ್ನು ಅ.24ರ ಗುರುವಾರ ಸಂಜೆಯೊಳಗೆ ತಪೋವನಕ್ಕೆ ಹಸ್ತಾಂತರಿಸಬಹುದು. ಇವುಗಳ ಪ್ರದರ್ಶನ 7 ಗಂಟೆ ಒಳಗೆ ಹಸ್ತಾಂತರಿಸತಕ್ಕದು. ನಾವು ಅವುಗಳನು ಅ.26 ಮತ್ತು 27ರಂದು ನಡೆಯಲಿವೆ.
ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ- ಪರಿಸರ ಸ್ನೇಹಿ ಗೂಡುದೀಪ, ಸಾಂಪ್ರದಾಯಕ ಗೂಡುದೀಪ ಹಾಗೂ ನವ್ಯ ಗೂಡು ದೀಪ- ನಡೆಯಲಿದ್ದು, ಎಲ್ಲಾ ಮೂರೂ ವಿಭಾಗಗಳಲ್ಲಿಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳಿರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಗೂಡುದೀಪಗಳ ಮಾರಾಟಕ್ಕೂ ಅವಕಾಶವಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ: 918792515828ಕ್ಕೆ ಕರೆ ಮಾಡಬಹುದು ಎಂದು ತಪೋವನದ ಪ್ರಕಟಣೆ ತಿಳಿಸಿದೆ.