ಉಡುಪಿ: ಅಕ್ಟೋಬರ್ 19:ಜಲ್ಲೆಯಲ್ಲಿ ಮತ್ತೊರ್ವ ಅಕ್ರಮ ಬಾಂಗ್ಲಾ ವಲಸಿಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಂತಕಟ್ಟೆಯಲ್ಲಿ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ಮಲ್ಪೆ ಪೊಲೀಸರು ಏಳು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ದರು
ಮಲ್ಪೆ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಎರಡು ದಿನಗಳ ಬಳಿಕ ಕಾರ್ಕಳದಲ್ಲಿ ಮತ್ತಿಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿತ್ತು.
ಬಂಧನಕ್ಕೊಳಗಾದ ಮಹಮ್ಮದ್ ಜಹಾಂಗೀರ್ ಆಲಂ ( 24) ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ಉಡುಪಿ ಎಸ್ ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.