ಉಡುಪಿ :ಅಕ್ಟೋಬರ್ 18:ಪ್ರಮೋದ್ ಮಧ್ವರಾಜ್ ಜನ್ಮದಿನದ ಪ್ರಯುಕ್ತ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ) ಕುಂದಾಪುರ ಇವರು ಆಯೋಜಿಸಿದ್ದ ಶ್ರೀ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಗೊ.ಡಾ ಎಡ್ತೆರೆ ನರಸಿಂಹ ಶೆಟ್ಟಿ ಸಭಾ ಮಂಚ್ ರೋಟರಿ ಕ್ಲಬ್ ಕುಂದಾಪುರದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಬಾರಿ ರಕ್ತದಾನ ಮಾಡಿದ ಮೂವರು ರಕ್ತದಾನಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೋಡ್ಗಿ, ಮಾಜಿ ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶ್ರೀ ಮೊಹಾನ್ ದಾಸ್ ಶೆಣೈ, ಅಧ್ಯಕ್ಷರು ಪುರಸಭೆ ಕುಂದಾಪುರ, ಡಾ| ನಾಗೇಶ್ ಫಿಜಿಶಿಯನ್ ಸರಕಾರಿ ಆಸ್ಪತ್ರೆ, ಕುಂದಾಪುರ, ಜಯಕರ್ ಶೆಟ್ಟಿ, ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ, ಡಾ| ವೇದಮೂರ್ತಿ ಗಾಯತ್ರಿ ಚೆನ್ನ ಕೇಶವ ಭಟ್, ಅನಗಳ್ಳಿ, ರೋವನ್ ಡಿ’ಕೋಸ್ಟ, ಅಧ್ಯಕ್ಷರು ಲಯನ್ಸ್ ಕ್ಲಬ್, ಹಂಗಳೂರು ಇವರು ಉಪಸ್ಥಿತರಿದ್ದರು.. ಹಲವು ಗಣ್ಯರು ಹಾಗೂ ಆತ್ಮೀಯರು ಭೇಟಿ ನೀಡಿ ಶುಭ ಹಾರೈಸಿದರು.. ಯಶಸ್ವಿ ರಕ್ತದಾನ ಶಿಬಿರದಲ್ಲಿ 130 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು..
ಭಾಗವಹಿಸಿದ ಮತ್ತು ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರೀತಿ ಹಾಗೂ ಗೌರವಪೂರ್ವಕ ಧನ್ಯವಾದಗಳು.