ಅಕ್ಟೋಬರ್ 18 :ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ವತಿಯಿಂದ ನವರಾತ್ರಿ ಸಂದರ್ಭದಲ್ಲಿ ನಡೆದ ಮೂರನೇ ವರುಷದ ಭವತಿ ಭೀಕ್ಷಂದೆಹಿ ಮೂಲಕ ಸಂಗ್ರಹಿಸಿದ 124,149 ರೂಪಾಯಿ ಒಟ್ಟು 5 ಕುಟುಂಬಗಳಿಗೆ ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನದಲ್ಲಿ ಹಸ್ತಾಂತರ ಮಾಡಲಾಯಿತು
ಬಂಟ್ವಾಳ ಪಿಲತ್ತಬೆಟ್ಟು ಗ್ರಾಮದ ವಸಂತಿ ಮತ್ತು ದತ್ತು ಪುತ್ರಿ ಉಮಾವತಿ ಇವರ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ 70,149 ನೀಡಲಾಯಿತು, ಹಾಗೂ ಬಂಟ್ವಾಳ ಬಿಳಿಯೂರು ಗ್ರಾಮದ ಯೋಗೀಶ್ ಚಿಕಿತ್ಸೆಗೆ 22,500 ,ಕುಪ್ಪೆಪದವು ನಿವಾಸಿ ವಸಂತಿ ಇವರಿಗೆ 10500 , ಮುತ್ತೂರು ನಿವಾಸಿ ಸುನಂದಾ ಇವರ ಜೀವನ ನಿರ್ವಹಣೆಗೆ 10500, ಮತ್ತು ಇರುವೈಲು ನಿವಾಸಿ ಭಾಗ್ಯ ಇವರ ಮಗನ ಚಿಕಿತ್ಸೆಗೆ 10500, ಧನ ಸಹಾಯ ನೀಡಲಾಯಿತು
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯವರು ಮತ್ತು ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇದರ ಕಾರ್ಯಕರ್ತರು ಉಪಸ್ಥಿತರಿದ್ದರು.