ಕಿನ್ನಿಗೋಳಿ :ಅಕ್ಟೋಬರ್ 17:ಕಿನ್ನಿಗೋಳಿಯ ಮುಖ್ಯರಸ್ತೆಯ ರಾಜಾಂಗಣದ ಬಳಿ ಅಲದ ಮರದ ರೆಂಬೆಯೊಂದು ಬೈಕ್ ಮೇಲೆ ಬಿದ್ದಿದೆ .
ಮುಖ್ಯ ರಸ್ತೆಯ ರಾಜಾಂಗಣ ಬಳಿಯ ಅಲದ ಕಬ್ಬಿಣದ ಕೆಲಸ ಗಾರ ಸುಧಾಕರ ಆಚಾರ್ಯ ಕೆಲಸದ ಕೋಣೆ ಇದ್ದು, ಬೆಳ್ಳಿಗ್ಗೆ ಸುಧಾಕರ ಆಚಾರ್ಯ ಅವರು ತಮ್ಮ ಬೈಕ್ ನಿಲ್ಲಿಸಿ ಒಳ ಹೋಗುವ ಸಂದರ್ಭ ಅಲದ ಮರದ ರೆಂಬೆ ಬೈಕ್ ಮೇಲೆ ಬಿದ್ದಿದೆ, ಸ್ವಲ್ಪ ಎಡಕ್ಕೆ ಅಥವ ಬಲ ಬದಿಗೆ ಬಿದ್ದಿದ್ದಲ್ಲಿ ಮುಖ್ಯ ರಸ್ಥೆ ಅಥವಾ ಸುಧಾಕರ ಆಚಾರ್ಯರ ಅಂಗಡಿ ಮೇಲೆ ಬೀಳುವ ಸಾದ್ಯತೆ ಹೆಚ್ಚಾಗಿತ್ತು ಅಲ್ಲಿದೆ ದೊಡ್ಡ ಅನಾಹುತವೊಂದು ತಪ್ಪಿದೆ. ಎನ್ನಲಾಗಿದೆ
ಅದರ ನಿಮಿಷದ ಮೊದಲು ಇಬ್ಬರು ಕೆಲಸಗಾರರು ತಮ್ಮ ಕಬ್ಬಿಣದ ಹಾರೆ ಪಿಕ್ಕಾಸು ಪಡೆದು ಕೊಂಡು ಹೋಗಿದ್ದರು ಎನ್ನಲಾಗಿದೆ .
ಸ್ಥಳಕ್ಕೆ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ಮೈಯದಿ, ಪಿಡಿಒ ಅರುಣ್ ಪ್ರದೀಪ್ ಡಿ’ಸೋಜಾ, ಕಾರ್ಯದರ್ಶಿ ಕೇಶವ ದೇವಾಡಿಗ ಪಂಚಾಯತ್ ಸದಸ್ಯರು ಭೇಟಿ ನೀಡಿದ್ದಾರೆ.