ಉಡುಪಿ :ಅಕ್ಟೋಬರ್ 16 :ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಕ್ಟೋಬರ್ 24,25ಮತ್ತು26ನೇ ತಾರೀಕಿನಂದು ನಡೆಯುವ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ (AIOC) ಕಾರ್ಯಾಲಯದ ಉದ್ಘಾಟನೆಯನ್ನು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀಶ್ರೀಸುಶ್ರೀಂದ್ರತೀರ್ಥಶ್ರೀಪಾದರು ಜೊತೆಯಾಗಿ ಗೀತಾಮಂದಿರದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು, ಈ ಸಮ್ಮೇಳನವು ಸರ್ವರ ಸಹಕಾರದಿಂದ ವೈಭವೋಪೇತವಾಗಿ ಯಶಸ್ವಿಯಾಗಿ ನಡೆಯುವಂತಾಗಲಿ. ಜಗತಗತ್ತಿನೆಲ್ಲೆಡೆ ತತ್ವಾಜ್ಞಾನ ಪಸರಿಸುವಂತಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಅಂಕಣಕಾರ, ವಾಗ್ಮೀ ರಾಷ್ಟ್ರಿಯವಾದೀ ಶ್ರೀಯುತ ರವೀಂದ್ರ ಜೋಷಿ, ಮಠದ ದಿವಾನರಾದ ಶ್ರೀಯುತ ನಾಗರಾಜ ಆಚಾರ್ಯ ಮತ್ತು ವಿದ್ವಾನ್ ಪ್ರಸನ್ನ ಆಚಾರ್ಯ, ಪತಂಜಲಿ ಯೋಗ ಸಂಸ್ಥೆಯ ಪದಾಧಿಕಾರಿಗಳು, ಸಂಸ್ಕೃತ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಡಾ.ಗೋಪಾಲ ಆಚಾರ್ಯ ಸ್ವಾಗತಿಸಿದರು. ಡಾ.ಷಣ್ಮುಖ ಹೆಬ್ಬಾರ್ ವಂದಿಸಿದರು.