ಉಡುಪಿ:ಅಕ್ಟೋಬರ್ 15:ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ವಿಜಯ ದಶಮಿಯ ಪರ್ವಕಾಲದಲ್ಲಿ ಬಲಿ ಉತ್ಸವವು ಕ್ಷೇತ್ರದ ಧರ್ಮದ ಶ್ರೀ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ ತಂತ್ರಿಗಳ ತಂತ್ರತ್ವ ದಲ್ಲಿ ಸಂಪನ್ನಗೊಂಡಿತು..
ಸಂಜೆ ಆರಾಧನಾ ರಂಗ ಪೂಜೆಯ ಬಳಿಕ ಬಲಿ ಉತ್ಸವ ಆರಂಭಗೊಂಡಿತು.. ಬಲಿ ಉತ್ಸವದಲ್ಲಿ ಶ್ರೀ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತು ವಿಶೇಷ ಆಕರ್ಷಣೆಯಾಗಿತ್ತು. ಪಲ್ಲಕ್ಕಿ ಉತ್ಸವ ವಸಂತ ಪೂಜೆ ನೆರವೇರಿತು. ವಸಂತ ಪೂಜೆಯಲ್ಲಿ ಸಮರ್ಪಿಸುವ ಅಷ್ಟವದನದಲ್ಲಿ ವೇದಮೂರ್ತಿ ವಿಕ್ಯಾತ್ ಭಟ್ ಶ್ರೀ ಸ್ವಸ್ತಿಕ್ ಆಚಾರ್ಯ ಶ್ರೀ ನಾಗಶಯನ ಶ್ರೀಮತಿ ಚಂದ್ರಕಲಾ ಶರ್ಮ ಶ್ರೀಮತಿ ಉಪ್ಪುರು ಭಾಗ್ಯಲಕ್ಷ್ಮಿ ಶ್ರೀ ಪ್ರೀತಮ್ ಕುಮಾರ್ ಶ್ರೀ ದುರ್ಗಾ ಆದಿಶಕ್ತಿ ಭಜನಾ ಮಂಡಳಿಯ ಸದಸ್ಯರು, ಸಹಕರಿಸಿದರು..
ಪಲ್ಲಕ್ಕಿ ಚಾಮರ ಸೇವೆ ಸಹಿತ ನೃತ್ಯವನ್ನು ಬೆಳ್ಮಣ್ಣು ವನದುರ್ಗ ಬಳಗದ ವಿಪ್ರಬಾಂಧವರು ನೆರವೇರಿಸಿದರು.. ನೃತ್ಯ ಸುತ್ತನ್ನು ಕುಮಾರಿ ಸ್ವಾತಿ ಆಚಾರ್ಯ ಯಕ್ಷಗಾನ ಸುತ್ತಿನಲ್ಲಿ ಉಪ್ಪುರು ಭಾಗ್ಯ ಲಕ್ಷ್ಮಿ ಭಜನೆ ಸುತ್ತಿನಲ್ಲಿ ಕಾಲಭೈರವ ಭಜನಾ ಮಂಡಳಿ ಗುಂಡಿಬೈಲು ಶೃಂಗಾರ ವಾದ್ಯದಲ್ಲಿ ವಿಜಯ ಸೇರಿಗಾರ್ ಮತ್ತು ಬಳಗದವರು ನಾದಸ್ವರ ವಾದನದಲ್ಲಿ ಅಲೆವೂರು ರಂಜಿತ್ ಸೇರಿಗಾರ, ಹಾಗೂ ಪಂಚವಾದ್ಯ ಸೇವೆ ನೆರವೇರಿತು.. ಅರ್ಚಕ ಅನಿಷ ಆಚಾರ್ಯ ಹಾಗೂ ಆನಂದ್ ಬಾಯರಿ ಸರ್ವಸೇವೆಯಲ್ಲಿ ಸಹಕರಿಸಿದರು
ದೇವಿಯ ನರ್ತನ ಸೇವೆಯನ್ನು ನೀರೇ ಬೈಲು ಶ್ರೀ ಗಣೇಶ್ ಭಟ್ ಅತಿ ಅದ್ಭುತವಾಗಿ ನಿರ್ವಹಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ