ಉಡುಪಿ :ಅಕ್ಟೋಬರ್ 15:ದೋಸೆ ಪ್ರಿಯರಿಗೆ ಶುಭಸುದ್ದಿ ಎನ್ನುವಂತೆ ಕೆಎಂಎಫ್ ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಈಗಾಗಲೇ ಕೆಎಂಎಫ್ ನಿಂದ ಹಾಲೂ ಹಾಗೂ ಹಾಲಿನ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಈಗ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್ ನಡಿ ದೋಸೆ ಹಿಟ್ಟನ್ನು ಪರಿಚಯಿಸಲಿದೆ.
ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ರೆಡಿ ಟು ಕುಕ್ ಪರಿಕಲ್ಪನೆಯಡಿ ಜನರು ಸುಲಭವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶವನ್ನು ನಂದಿನಿಯ ದೋಸೆ ಹಿಟ್ಟು ಕಲ್ಪಿಸಲಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಸುಲಭವಾಗಿ ದೋಸೆ ಮಾಡಲು ಪೂರಕವಾಗಿ ಕೆಎಂಎಫ್ ದೋಸೆ ಹಿಟ್ಟು ಸಹಕಾರಿಯಾಗಲಿದೆ.