ಕಾರ್ಕಳ :ಅಕ್ಟೋಬರ್ 14:ಬೈಪಾಸ್ ರಸ್ತೆಯಲ್ಲಿರುವ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸಿ ಹಣ ನೀಡದೆ ಪರಾರಿಯಾಗಿದ್ದ ಕಾರನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಬಂಟಕಲ್ಲು ನಿವಾಸಿಗಾಗಿ ಶೋಧ ನಡೆಯುತ್ತಿದೆ.
ಸೆಪ್ಟೆಂಬರ್ .29ರಂದು ಬೆಳಗ್ಗಿನ ಜಾವ 2.30ರ ವೇಳೆಗೆ ಕಾರಿಗೆ 4,253.88 ರೂ.ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡ ಆರೋಪಿ, ಬಳಿಕ ಪೆಟ್ರೋಲ್ ಬಂಕ್ ಸಿಬಂದಿ ಆಕಾಶ್ ಎಂಬವರಲ್ಲಿ ಸ್ಕ್ಯಾನರ್ ತರುವಂತೆ ಹೇಳಿದ್ದ. ಆಕಾಶ್ ಸ್ಕ್ಯಾನರ್ ತರಲು ಹೋಗಿದ್ದಾಗ ಆರೋಪಿಯು ಕಾರಿನೊಂದಿಗೆ ಪರಾರಿಯಾಗಿದ್ದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಸಿಕೆಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಯು ಕುಕ್ಕುಂದೂರು-ಗಣಿತನಗರ ಮಾರ್ಗವಾಗಿ ಹೋಗಿರುವುದು ತಿಳಿಯಿತು. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.