ಉಡುಪಿ: ಅಕ್ಟೋಬರ್ 13: ಉದ್ಯೋಗದ ಸಂದರ್ಶನಕ್ಕೆಂದು ಮನೆಯಿಂದ ಹೋದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಡೆಕಾರು ಗ್ರಾಮದ ಮನೋಜ್ (33) ನಾಪತ್ತೆಯಾದ ವ್ಯಕ್ತಿ,ಎಂಜಿನಿಯರಿಂಗ್ ಪದವೀಧರರಾಗಿರುವ ಅವರು ಸರಿಯಾದ ಉದ್ಯೋಗ ಲಭಿಸದೆ ಮನೆಯಲ್ಲೇ ಇರುತ್ತಿದ್ದರು. ಅ. 9ರಂದು ಹೋದವರು ಸಂಜೆಯಾದರೂ ಮನೆಗೆ ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ ಎನ್ನುವ ಸಂದೇಶ ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯ ವಾಗಿದೆ