ಉಡುಪಿ :ಅಕ್ಟೋಬರ್ 10:ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರುತ್ತಿರುವ ಶರನ್ನವ ರಾತ್ರಿ ಮಹೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ವಿದ್ಯಾರಂಭಕ್ಕೆ ಚಾಲನೆ ನೀಡಲಾಯಿತು..
ದಕ್ಷಿಣ ಭಾರತದಲ್ಲಿ ಅತಿ ಉತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಶ್ರೀಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸಾಕ್ಷಾತ್ ಸರಸ್ವತಿಯ ಅನುಗ್ರಹದ ನೆಲೆಯಲ್ಲಿ ಅನೇಕ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಯಿತು..
ಮಧ್ಯಾಹ್ನ ಅನೇಕ ನೃತ್ಯಲಯದ ನೃತ್ಯಾರ್ಥಿಗಳು ನೃತ್ಯ ಸೇವೆ ಸಮರ್ಪಿಸಿದರು.ಪದಕಣ್ಣಾಯ ಸಹೋದರರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಜೋಡಿ ಚಂಡಿಕಾಯಾಗ ಶ್ರೀ ಜೆ ಎಂ ಟಿ ಟ್ರಾವೆಲ್ಸ್ ನ ಮಾಲಿಕ ಶ್ರೀಯುತ ಆನಂದಬಾರಿ ಅವರ ಬಾಪ್ತು ಹಾಗೂ ಮುಂಬೈಯ ಶ್ರದ್ಧಾ ಮತ್ತು ಮನೆಯವರ ಭಪ್ತು ಸಮರ್ಪಿ ತಗೊಂಡಿತು
ಸುಧನ್ವ ಮುದ್ರಾಡಿ ಮತ್ತು ಮನೆಯವರ ಭಕ್ತ ದುರ್ಗಾ ನಮಸ್ಕಾರ ಪೂಜೆ ಹಾಗೂ ರಂಗಪೂಜೆ ನೆರವೇರಿತು.
ನವಶಕ್ತಿ ವೇದಿಕೆಯಲ್ಲಿ ವಿದುಷಿ ಶುಭಶ್ರೀ ಅಡಿಗ ಮತ್ತು ಬಳಗದವರಿಂದ ವೀಣಾ ನಾದಲಹರಿ
ಡಾ. ಮಂಜರಿ ಚಂದ್ರ ಪುಷ್ಪರಾಜ್ ನೇತೃತ್ವದ ಸೃಷ್ಟಿಕಲ ಕುಟೀರದ ಕಲಾವಿದರಿಂದ ನೃತ್ಯ ವೈವಿಧ್ಯ, ಸೀತಾರಾಮ ಭಜನಾ ಮಂಡಳಿ ಭಜನೆ ಸಂಕೀರ್ತನೆ ನೆರವೇರಿತು..
ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದಕ್ಕೆ ಹಾಗೂ ದೇವರ ದರ್ಶನಕ್ಕಾಗಿ ಸಹಸ್ರೋಪಾದಿಯಲ್ಲಿ ಭಕ್ತ ಸಾಗರ ಹರಿದು ಬಂದಿತ್ತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..