ಉಡುಪಿ : ಅಕ್ಟೋಬರ್ 10:ಆದರ್ಶಮಯ ಜೀವನ ನಡೆಸಿದ ಅವರು ನಮ್ಮ ಪುತ್ತಿಗೆ ಮೂಲ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಭಗವದ್ಗೀತೆಯ ಬಗ್ಗೆ ತಮಗಿರುವ ಆದರ ಪ್ರಕಟಿಸಿದ್ದು ನಮ್ಮ ಮನಸ್ಸಿನಲ್ಲಿ ಹಸಿರಾಗಿದೆ. ಶ್ರೀ ಕೃಷ್ಣ ಮುಖ್ಯಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶ್ರೀ ಪುತ್ತಿಗೆ ವಿದ್ಯಾಪೀಠಕ್ಕೆ ಶ್ರೀ ರತನ್ ಟಾಟಾ ಭೇಟಿ 10.02.2014 ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಶ್ರೀಯುತ ರತನ್ ಟಾಟಾ ಅವರು ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನ ಮೇರೆಗೆ ಶ್ರೀಪುತ್ತಿಗೆ ಮೂಲಮಠದಲ್ಲಿರುವ ವಿದ್ಯಾಪೀಠಕ್ಕೆ ಭೇಟಿಕೊಟ್ಟು ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನಮಾಡಿ ನೂತನ ಸ್ವಾಗತ ಗೋಪುರ ಉದ್ಘಾಟನೆಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದರು