ಉಡುಪಿ :ಅಕ್ಟೋಬರ್ 09:ಕರಾವಳಿಯ ಪ್ರಸಿದ್ಧ ಬಟ್ಟೆಗಳ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಪುರುಷರ ಬಟ್ಟೆಗಳ ವಿಶಾಲ ವಿಭಾಗದ ಉದ್ಘಾಟನೆ ಸಂಸ್ಥೆಯ ಒಂದನೇ ಮಹಡಿಯಲ್ಲಿ ಇಂದು ಅಕ್ಟೋಬರ್ 09ರಂದು ಬೆಳಗ್ಗೆ 9.45ಕ್ಕೆ ಗ್ರಾಹಕರಿಂದಲೇ ಉದ್ಘಾಟನೆಗೊಂಡಿತು
ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಸಹಕಾರದ ಹಿನ್ನೆಲೆಯಲ್ಲಿ “ಗ್ರಾಹಕರೇ ದೇವರು’ ಪರಿಕಲ್ಪನೆಯಡಿ ಗ್ರಾಹಕರಿಂದಲೇ ನವಿಕ್ರತ ಪುರುಷರ ವಿಭಾಗದ ಉದ್ಘಾಟನೆ ಕಾರ್ಯಕ್ರಮದ ವಿಶೇಷತೆಯಾಗಿತ್ತು
ಶ್ಯಾಮಿಲಿ ಚಾರಿಟೆಬಲ್ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್,ಮಾಂಡವಿ ಬಿಲ್ಡರ್ ಆ್ಯಂಡ್ ಡೆವಲಪರ್ಸ್ ನ ಪ್ರವರ್ತಕ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಶಾಸಕ ಯಶ್‌ಪಾಲ್ ಎ. ಸುವರ್ಣ, ಪ್ರಮುಖರಾದ ಡಾ| ಕಟ್ಟೆ ರವಿರಾಜ್ ಆಚಾರ್ಯ, ಶ್ರೀಶ ನಾಯಕ್ ಪೆರ್ಣಂಕಿಲ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಮಹಮ್ಮದ್ ಮೌಲಾ, ಹಫೀಝ್ ರೆಹಮಾನ್, ನಾರಾಯಣ ಸರಳಾಯ, ಮೊಹಮ್ಮದ್ ಮೌಲಾ ಮೊದಲಾದವರು ಶುಭ ಹಾರೈಸಿದರು.
ಗ್ರಾಹಕ ಪ್ರಮುಖರಾದ ಪುರುಷೋತ್ತಮ್ ಪಿ. ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್, ಅಮಿತಾ ವಾಸು ರಾಜಸ್ಥಾನ, ಮಾಲತಿ ತೀರ್ಥಹಳ್ಳಿ, ಕಿಶನ್ ಪ್ರಭು ಪಳ್ಳಿ, ಪ್ರದೀಪ್ ನಾಯಕ್ ನೀರೆ, ಪ್ರಶಾಂತ್ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ನಾರಾಯಣ ಶೆಣೈ, ಕೃಷ್ಣಮೂರ್ತಿ, ಸತ್ಯಾನಂದ ನಾಯಕ್, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಮ ಕಾರ್ಕಳ, ಪ್ರಕಾಶ್ ಪ್ರಭು, ರತ್ನಾಕರ ಪೆರ್ಡೂರು, ಆಸಿಫ್, ನಿತ್ಯಾನಂದ ನಾಯಕ್, ಸಂಸ್ಥೆಯ ಪಾಲುದಾರರಾದ ಲಕ್ಷ ¾ಣ್ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಮತ್ತು ಪಾಲುದಾರರ ಕುಟುಂಬಸ್ಥರು, ಹಿತೈಷಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಾಲುದಾರರಾದ ಸಂತೋಷ್ ವಾಗ್ಲೇ ಸ್ವಾಗತಿಸಿ, ರಾಮಕೃಷ್ಣ ನಾಯಕ್ ವಂದಿಸಿದರು. ನಿಖೀತಾ ಎರ್ಲಪಾಡಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಒಂದನೇ ಮಹಡಿಯಲ್ಲಿ ಪುರುಷರಿಗಾಗಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್‌ವೇರ್, ಕ್ಯಾಶುಯಲ್ ವೇರ್, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್-ಶರ್ಟಿಂಗ್ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡಿದೆ .
ಗೀತಾಂಜಲಿ ಸಿಲ್ಕ್ಸ್ ನ ನೂತನ ಪುರುಷರ ವಿಭಾಗವು 15 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಅಲೈನ್ ಸೊಲ್ಲಿ, ಪೀಟರ್ ಇಂಗ್ಲೆಡ್, ಲಿವೈಸ್, ಬ್ಲ್ಯಾಕ್ ಬೆರ್ರಿ, ಕಿಲ್ಲರ್ ಸಹಿತ ಒಟ್ಟು 22ಕ್ಕೂ ಅಧಿಕ ವಿವಿಧ ಬ್ರ್ಯಾಂಡ್‌ಗಳ ಉತ್ಪನ್ನಗಳು ಇಲ್ಲಿವೆ. ಇತರ ಬ್ರ್ಯಾಂಡ್‌ಗಳ ಬಟ್ಟೆಗಳು ಇಲ್ಲಿವೆ. ಪ್ರತ್ಯೇಕ ಟೈಲರಿಂಗ್ ವಿಭಾಗವೂ ಇಲ್ಲಿದೆ. ಕಂಪೆನಿಯ ಆಫರ್‌ಗಳೂ ಗ್ರಾಹಕರಿಗೆ ನೇರವಾಗಿ ಸಿಗಲಿದೆ.