ಉಡುಪಿ :ಅಕ್ಟೋಬರ್ 09:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಯುವ ಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 18ರಿಂದ 40 ವರ್ಷ ದೊಳಗಿನ ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣವಾದ ಪರಿಶಿಷ್ಟ ಜಾತಿಯ ಯುವಕ ಹಾಗೂ ಯುವತಿಯರಿಗೆ ನವೆಂಬರ್ 7ರಿಂದ 26ರವರೆಗೆ ಒಟ್ಟು 20 ದಿನಗಳ ಹೊಲಿಗೆ ತರಬೇತಿ ಶಿಬಿರ ಹಾಗೂ ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿಗಳಿಗೆ ನವೆಂಬರ್ 15ರಿಂದ 26ರವರೆಗೆ ಒಟ್ಟು 12 ದಿನಗಳ ವಿಡಿಯೋಗ್ರಾಫಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿ ಶಿಬಿರಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಅರ್ಜಿ ಸಲ್ಲಿಸಲು ನವೆಂಬರ್ 2 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ .:0820-2521324, .: 9480886467ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.