ಉಡುಪಿ :ಅಕ್ಟೋಬರ್ 08:ಕರಾವಳಿಯ ಅತಿ ವಿಶಾಲವಾದ ಬಟ್ಟೆಗಳ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಪುರುಷರ ಬಟ್ಟೆಗಳ ವಿಶಾಲ ವಿಭಾಗದ ಉದ್ಘಾಟನೆ ಸಂಸ್ಥೆಯ ಒಂದನೇ ಮಹಡಿಯಲ್ಲಿ ನಾಳೆ ಅಕ್ಟೋಬರ್ 09ರಂದು ಬೆಳಗ್ಗೆ 9.45ಕ್ಕೆ ಸೇರುವ ಗ್ರಾಹಕರಿಂದಲೇ ಉದ್ಘಾಟನೆ ನೆರವೇರಲಿದೆ
ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಸಹಕಾರದ ಹಿನ್ನೆಲೆಯಲ್ಲಿ “ಗ್ರಾಹಕರೇ ದೇವರು’ ಪರಿಕಲ್ಪನೆಯಡಿ ಗ್ರಾಹಕರಿಂದಲೇ ನವಿಕ್ರತ ಪುರುಷರ ವಿಭಾಗದ ಉದ್ಘಾಟನೆ ಕಾರ್ಯಕ್ರಮದ ವಿಶೇಷತೆಯಾಗಿದೆ ಎಂದು ಗೀತಾಂಜಲಿ ಸಂಸ್ಥೆಯ ಪ್ರವರ್ತಕರಾದ ಸಂತೋಷ್ ವಾಗ್ಲೆ ಅವರು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೂತನ ಒಂದನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್‌ವೇರ್, ಕ್ಯಾಶುಯಲ್ ವೇರ್, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್-ಶರ್ಟಿಂಗ್ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡ ವಿಶಾಲ ವಿಭಾಗವಿದೆ. ಈಗಾಗಲೇ ಸಂಸ್ಥೆಯ 3ನೇ ಮಹಡಿಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಬೇಕಿರುವ ವಸ್ತ್ರಗಳಿವೆ. 2ನೇ ಮಹಡಿಯಲ್ಲಿ ಸೀರೆಗಳ ಅಪಾರ ಸಂಗ್ರಹವಿದೆ
ಗೀತಾಂಜಲಿ ಸಿಲ್ಕ್ಸ್ ನ ನೂತನ ಪುರುಷರ ವಿಭಾಗವು 15 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಅಲೈನ್ ಸೊಲ್ಲಿ, ಪೀಟರ್ ಇಂಗ್ಲೆಡ್, ಲಿವೈಸ್, ಬ್ಲ್ಯಾಕ್ ಬೆರ್ರಿ, ಕಿಲ್ಲರ್ ಸಹಿತ ಒಟ್ಟು 22ಕ್ಕೂ ಅಧಿಕ ವಿವಿಧ ಬ್ರ್ಯಾಂಡ್‌ಗಳ ಉತ್ಪನ್ನಗಳು ಇಲ್ಲಿವೆ. ಇತರ ಬ್ರ್ಯಾಂಡ್‌ಗಳ ಬಟ್ಟೆಗಳು ಇಲ್ಲಿವೆ. ಪ್ರತ್ಯೇಕ ಟೈಲರಿಂಗ್ ವಿಭಾಗವೂ ಇಲ್ಲಿದೆ. ಕಂಪೆನಿಯ ಆಫರ್‌ಗಳೂ ಗ್ರಾಹಕರಿಗೆ ನೇರವಾಗಿ ಸಿಗಲಿದೆ ಎಂದು ಪ್ರವರ್ತಕರು ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಪಾಲುದಾರ ಸಹೋದರರಾದ ರಾಮಕೃಷ್ಣ ನಾಯಕ್, ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ ನಾಯಕ್ ಉಪಸ್ಥಿತರಿದ್ದರು